ಹುಬ್ಬಳ್ಳಿ: ಆರೋಪಿ ವಿಶ್ವಗೆ ಗಲ್ಲು ಶಿಕ್ಷೆ ಕೊಡಿ, ಇಲ್ಲವೇ ಎನ್ ಕೌಂಟರ್ ಮಾಡಿ ಎಂಬುದಾಗಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆಯ ಬಳಿಕ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವಂತ ಮೃತ ಅಂಜಲಿ ಸಹೋದರಿ ಯಶೋಧ ಒತ್ತಾಯಿಸಿದ್ದಾರೆ.
ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಕಣ್ಣಮುಂದೆಯೇ ನಡೆದಂತ ಅಕ್ಕ ಅಂಜಲಿಯ ಹತ್ಯೆಯಿಂದ ವಿಚಲಿತಳಾಗಿ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದರು.
ನ್ಯಾಯಾಲಯದ ಆರ್ಡರ್ ಇದೆ ಅಂತ ಆರೋಪಿಗೆ ಚಿಕಿತ್ಸೆ ಕೊಡ್ತಿದ್ದಾರಂತೆ. ಆರೋಪಿ ವಿಶ್ವ ನಮ್ಮ ಅಕ್ಕನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದನು. ಹೀಗಾಗಿ ಮನಸ್ಸಿಗೆ ನೋವಾಗಿದೆ. ಬರೀ ಸುಳ್ಳೇ ಓಡಾಡುತ್ತಿದ್ದಾವೆ ಎಂದರು.
ನನ್ನ ಅಕ್ಕ ಅಂಜಲಿ ಹಿರೇಮಠ್ ಹತ್ಯೆ ಆರೋಪಿ ವಿಶ್ವಗೆ ಗಲ್ಲು ಶಿಕ್ಷೆ ಕೊಡಬೇಕು. ಇಲ್ಲವೇ ಆತನನ್ನು ಎನ್ ಕೌಂಟರ್ ಮಾಡಬೇಕು ಎಂಬುದಾಗಿ ಇದೇ ಸಂದರ್ಭದಲ್ಲಿ ಮೃತ ಅಂಜಲಿ ಸಹೋದರಿ ಯಶೋಧ ಒತ್ತಾಯಿಸಿದರು.
ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ‘ಡಾ.ಕೆ.ಕೆ ಮಂಜುನಾಥ್’ ಗೆಲ್ಲಿಸಿ- ಮಧು ಬಂಗಾರಪ್ಪ ಮನವಿ