Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾತ್ರೆ ಬೇಡ, ಕೆಮಿಕಲ್ ಬೇಡ; ಲೈಂಗಿಕ ಸಾಮರ್ಥ್ಯ ಮತ್ತು ಸ್ಟ್ಯಾಮಿನಾ ಹೆಚ್ಚಿಸಬಲ್ಲ ಸೂಪರ್ ಫುಡ್ಸ್ ಇವು! | Sexual Stamina

ದಿನವೂ ಧರಿಸುವ ನೈಟಿ, ಲುಂಗಿಗಳನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು? ಇಲ್ಲಿದೆ ಆರೋಗ್ಯದ ರಹಸ್ಯ!

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಗ್ರಾಮೀಣ ಪತ್ರಕರ್ತ’ರಿಗೆ ಬಸ್ ಪಾಸ್: ‘KUWJ ನಿಯೋಗ’ದಿಂದ ‘ಸಿಎಂ ಸಿದ್ಧರಾಮಯ್ಯ’ಗೆ ಅಭಿನಂದನೆ
KARNATAKA

‘ಗ್ರಾಮೀಣ ಪತ್ರಕರ್ತ’ರಿಗೆ ಬಸ್ ಪಾಸ್: ‘KUWJ ನಿಯೋಗ’ದಿಂದ ‘ಸಿಎಂ ಸಿದ್ಧರಾಮಯ್ಯ’ಗೆ ಅಭಿನಂದನೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ೋಷಣೆ ಮಾಡುವ ಮೂಲಕ ಬೇಡಿಕೆ ಈಡೇರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲೂೃಜೆ ಅಭಿನಂದನೆ ಸಲ್ಲಿಸಿದೆ.

ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರುಗಳನ್ನೊಳಗೊಂಡ ನಿಯೋಗ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿ ಮಾಡಿ ಧನ್ಯವಾದ ತಿಳಿಸಿತು.

ಬಹು ವರ್ಷಗಳ ಬೇಡಿಕೆಯಾಗಿದ್ದ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ಸಂಬಂಧ ಇತ್ತಿಚೆಗೆ ದಾವಣಗೆರೆಯಲ್ಲಿ ನಡೆದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತು ಕೊಟ್ಟಂತೆ ನಡೆದುಕೊಂಡಿರುವುದನ್ನು ನೆನಪಿಸಿದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯದ ಸಾವಿರಾರು ಗ್ರಾಮೀಣ ಪತ್ರಕರ್ತರಿಗೆ ಇದರಿಂದ ಅನುಕುಲ ಆಗಲಿದ್ದು, ನಿಮ್ಮ ಈ ಉದಾರತೆಗೆ ಪತ್ರಕರ್ತರ ಸಂಘ ಸದಾ ಚಿರರುಣಿಯಾಗಿರುತ್ತದೆ ಎಂದರು.

ಇದಕ್ಕೆ ಮುಖ್ಯಮಂತ್ರಿಗಳು ನಗುತ್ತಲೇ ಕೈ ಜೋಡಿಸಿ, ನಿಯೋಗಕ್ಕೆ ಪ್ರತಿ ಧನ್ಯವಾದ ತಿಳಿಸಿದರು.

ತಮಗೆ ಅಭಿನಂದನಾ ಕಾರ್ಯಕ್ರಮಕ್ಕೆ ದಿನಾಂಕ ನೀಡುವಂತೆ ವಿನಂತಿಸಿದಾಗ, ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ದಿನಾಂಕ ನೀಡುವೆ ಎಂದು ಸಿಎಂ ತಿಳಿಸಿದರು.

ಸಂಘದ ನಿಯೋಗದೊಂದಿಗೆ ಮುಖ್ಯಮಂತ್ರಿಗಳು ಬಹಳ ಪ್ರೀತಿ ಮತ್ತು ವಿಶ್ವಾಸದಿಂದ ಮನದುಂಬಿ ಮಾತನಾಡಿದರು.

ನಿಯೋಗದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲಿಕ ಬಾಳೋಜಿ, ಭವಾನಿಸಿಂಗ್ ಠಾಕೂರ್, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ವಿಜಯನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಮಂಗಳೂರು ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ ಇಂಡಾಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬೀದರ್‌ನ ಶಿವಕುಮಾರ ಸ್ವಾಮಿ, ರಾಯಚೂರಿನ ಮೊಹಮದ್ ಪಾಷ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಹುಬ್ಬಳ್ಳಿಯ ಗಣಪತಿ ಗಂಗೊಳ್ಳಿ, ಹಾಸನದ ಎಚ್.ಬಿ.ಮದನಗೌಡ, ರಾಯಚೂರಿನ ಶಿವಮೂರ್ತಿ, ಮಂಗಳೂರು ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಖಜಾಂಚಿ ಪುಷ್ಪರಾಜ್ ಮುಂತಾದವರು ನಿಯೋಗದಲ್ಲಿದ್ದರು.

‘ಆಧಾರ್ ಕಾರ್ಡ್’ ನವೀಕರಿಸಲು ಈ ದಿನವೇ ಲಾಸ್ಟ್ ಡೇಟ್ : ಈ ಸರಳ ರೀತಿಯಲ್ಲಿ ‘ಅಪ್ ಡೇಟ್’ ಮಾಡಿಸಿಕೊಳ್ಳಿ

Fact Chek: ಸಾರಿಗೆ ಬಸ್ಸುಗಳಲ್ಲಿ ಉಚಿತ ಸಂಚಾರಕ್ಕೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಬೇಕೇ.? ಇಲ್ಲಿದೆ ವೈರಲ್ ಸುದ್ದಿಯ ‘ಅಸಲಿ ಸತ್ಯ’

Share. Facebook Twitter LinkedIn WhatsApp Email

Related Posts

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

1 Min Read

ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ

2 Mins Read

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

2 Mins Read
Recent News

ಮಾತ್ರೆ ಬೇಡ, ಕೆಮಿಕಲ್ ಬೇಡ; ಲೈಂಗಿಕ ಸಾಮರ್ಥ್ಯ ಮತ್ತು ಸ್ಟ್ಯಾಮಿನಾ ಹೆಚ್ಚಿಸಬಲ್ಲ ಸೂಪರ್ ಫುಡ್ಸ್ ಇವು! | Sexual Stamina

ದಿನವೂ ಧರಿಸುವ ನೈಟಿ, ಲುಂಗಿಗಳನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು? ಇಲ್ಲಿದೆ ಆರೋಗ್ಯದ ರಹಸ್ಯ!

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

‘ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಇಲ್ಲ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು!’: ಸುಪ್ರೀಂ ಕೋರ್ಟ್

State News
KARNATAKA

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

By ವಸಂತ ಬಿ ಈಶ್ವರಗೆರೆ KARNATAKA 1 Min Read

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಲಿಂಡರ್‌ಗಾಗಿ ಸಾರ್ವಜನಿಕರು…

ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

ಜೂನ್.1ರಂದು ಶಿವಮೊಗ್ಗದಲ್ಲಿ ಸಿಎಂ ಸಿದ್ಧರಾಮಯ್ಯ ‘ಕರ್ನಾಟಕ ಪಬ್ಲಿಕ್ ಶಾಲೆ’ಗಳ ಶಂಕುಸ್ಥಾಪನೆ; ಸಚಿವ ಮಧು ಬಂಗಾರಪ್ಪ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.