ದಾವಣಗೆರೆ : ದಾವಣಗೆರೆಯಲ್ಲಿ ಒಂದು ಮನಕಲಕುವ ಘಟನೆ ನಡೆದಿದ್ದು, ತನ್ನ ತಂದೆಯ ಸಾವಿನಿಂದ ಮನನೊಂದ ಮಗನೊಬ್ಬ ಮನನೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಸಮೀಪದ ಚೀಲಾಪುರ ಗ್ರಾಮದಲ್ಲಿ ನಡೆದಿದೆ.
ಹೌದು, ಚೀಲಾಪುರ ಗ್ರಾಮದ ಚಂದ್ರನಾಯ್ಕ (65) ಗುರುವಾರ ಬೆಳಗ್ಗೆ ಮೃತಪಟ್ಟಿದ್ದರು. ಇದರಿಂದ ಬೇಸತ್ತು ಪುತ್ರ ಶಿವಕುಮಾರ್ (32) ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
8 ವರ್ಷಗಳ ಹಿಂದೆ ಕಬ್ಬು ಕಟಾವು ಮಾಡುವ ವೇಳೆ ಶಿವಕುಮಾರ್ ಕೈ ತುಂಡಾಗಿತ್ತು. ಹಾಗಾಗಿ ಅವರ ತಂದೆ ಶಿವಕುಮಾರ್ ಗಾಗಿ ಎಲ್ಲಕಡೆಗೂ ಆಸ್ಪತ್ರೆಗೆ ತೋರಿಸಿ ಸಾಲ ಸೋಲ ಮಾಡಿ ಆತನ ಆರೈಕೆ ಮಾಡಿದ್ದರು.
ಹೀಗಾಗಿ ತಂದೆಯ ಸಾವಿನ ನಂತರ ತನ್ನ ಮುಂದಿನ ಭವಿಷ್ಯ ಏನು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಿವಕುಮಾರ ಸಹೋದರ ರವಿಕುಮಾರ್ ತಿಳಿಸಿದ್ದಾರೆ.ಘಟನೆ ಕುರಿತಂತೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.