ಬೆಂಗಳೂರು : ನನ್ನ ಪ್ರಕಾರ ಈ ಬಾರಿ ಕೈ ಮೈತ್ರಿಕೂಟದ ಇಂಡಿಯಾ ಅಧಿಕಾರಕ್ಕೆ ಬರುತ್ತದೆ, ಬಿಜೆಪಿಯವರು ಪ್ರಧಾನಿಯಾಗಲು ಸಾಧ್ಯವೇ ಇಲ್ಲ.ಇಂಡಿಯಾ ಮೈತ್ರಿ ಕೂಟ ಭಾರತ ದೇಶವನ್ನು ಆಳುತ್ತದೆ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಪರ್ಮನೆಂಟಾಗಿ ಅವರ ಮೈತ್ರಿ ಇರಲಿ ನಮ್ಮದೇನು ಅಭ್ಯಂತರವಿಲ್ಲ. ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.
ಯಾರ ಫೋಟೋ ಬೇಕಾದರೂ ಹಾಕಿಕೊಂಡು ಚುನಾವಣೆಗೆ ಹೋಗಲಿ ಯಾರ ಬೇಕಾದರೂ ಜೋಡಣೆ ಮಾಡಿಕೊಳ್ಳಲಿ ಯಾವುದಕ್ಕೂ ನಮ್ಮ ಅಭ್ಯಂತರವಿಲ್ಲ. ಇನ್ನು ಪ್ರಜ್ವಲ್ ರೇವಣ್ಣ ಶೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಭಾರತಕ್ಕೆ ಆಗಮಿಸಿದ ಪ್ರಜ್ವಲ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಡಿಸಿಎಂ ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೆ ಹಾಗೆ ತೆರಳಿದರು.