ಬೆಂಗಳೂರು : ತಂದೆ ಕಾರ್ ವಾಶ್ ಮಾಡುತ್ತಿದ್ದ ವೇಳೆ ಬಾಲಕ ಕಾರಿನ ಎಕ್ಸಲೇಟರ್ ಒತ್ತಿದರಿಂದ ಐದು ವರ್ಷದ ಮಗು ದುರಂತವಾಗಿ ಸಾವನ್ನಪ್ಪಿರುವ ಘಟನೆಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು ಬಾಲಕ 15 ವರ್ಷದವನೆಂದು ತಿಳಿದಿದ್ದು ಇದೀಗ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು ಘಟನೆಯಲ್ಲಿ ಮತ್ತೊಂದು ಮಗುವಿಗೆ ಗಂಭೀರ ಗಾಯ 5 ವರ್ಷದ ಬಾಲಕ ಧನರಾಜ್ ಗೆ ಗಂಭೀರ ಗಾಯವಾಗಿದೆ. ರಾಯಚೂರು ಮೂಲದ ಲೋಕೇಶ್ ಪುತ್ರ ಧನರಾಜ್ ಎನ್ನುವ ಬಾಲಕನಿಗೆ ಗಂಭೀರವಾದ ಗಾಯವಾಗಿದೆ.ಲೋಕೇಶ್ ಬ್ಯಾಂಕ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಕಾರಿನ ಮೇಲೆ ಪೊಲೀಸ್ ಫಲಕ ಪತ್ತೆಯಾಗಿದ್ದು, ಸದ್ಯ ಕಾರು ಓಡಿಸುತ್ತಿದ್ದ ಬಾಲಕನನ್ನು ಇದೀಗ ಬಂಧಿಸಲಾಗಿದೆ.
ಬೆಂಗಳೂರಿನ ಓಲ್ಡ್ ಏರ್ ಪೋರ್ಟ್ ರಸ್ತೆ ಮುರುಗೇಶಪಾಳ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಬಾಲಕನನ್ನು 5 ವರ್ಷದ ಅರವ್ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ 10.30ರ ಸುಮಾರಿಗೆ ಈ ದುರಂತ ನಡೆದಿದೆ. 15 ವರ್ಷದ ಬಾಲಕನೊರ್ವ ತಂದೆಯ ಜತೆ ಕಾರ್ ವಾಶ್ ಮಾಡುತ್ತಿದ್ದ. ಇದೇ ವೇಳೆ ಕಾರಿನ ಡ್ರೈವಿಂಗ್ ಸೀಟ್ನಲ್ಲಿ ಕುಳಿತ ಬಾಲಕ ಏಕಾಏಕಿ ಎಕ್ಸಿಲೇಟರ್ ತುಳಿದಿದ್ದಾನೆ. ಪರಿಣಾಮ ಕಾರು ರಭಸವಾಗಿ ಚಲಿಸಿದೆ.
ಅಲ್ಲೇ ಕಾರ್ ಬಳಿ ಆಟವಾಡುತ್ತಿದ್ದ 5 ವರ್ಷದ ಆರವ್ ಮೇಲೆ ಹರಿದಿದೆ. ಕಾರು ಗುದ್ದಿದ ರಭಸಕ್ಕೆ ಆರವ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಘಟನೆ ನಂತರದ ತಕ್ಷಣ ಮಗುವಿನ ಮೃತ ದೇಹವನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಈ ಒಂದು ಕಾರು ಅಪಘಾತದ ವೇಳೆ ಮಗುವಿಗೆ ಗುದ್ದಿದ ನಂತರ ಪ್ರಶ್ನೆ ಬದಿಯಲ್ಲಿದ್ದ ಬೈಕುಗಳಿಗೂ ಕೂಡ ಕಾರು ಗುದ್ದಿದೆ ಎಂದು ತಿಳಿದು ಬಂದಿದೆ. ಇದೀಗ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.