ಹಾಸನ : ಪ್ರಜ್ವಲ್ ರೇವಣ ಅಶ್ಲೀಲ ವಿಡಿಯೋ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ SIT ಅಧಿಕಾರಿಗಳು ಪ್ರೀತಮ್ ಗೌಡ ಕಚೇರಿಯ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.
ಹೌದು ಅಶ್ಲೀಲ ವಿಡಿಯೋ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಮಾಜಿ ಶಾಸಕ ಪ್ರೀತಂ ಗೌಡ ಕಛೇರಿ ಸಿಬ್ಬಂದಿಗಳಾದ ಚೇತನ್ ಹಾಗೂ ಲಿಖಿತ್ ಗೌಡ ಎನ್ನುವ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇದೀಗ ಚೇತನ್ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು ಮಹಜರು ನಡೆಸುತ್ತಿದ್ದು ಹಾಸನ ತಾಲೂಕಿನ ಯಲಗುಂದ ಗ್ರಾಮದಲ್ಲಿರುವ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು ಸಹಜರು ನಡೆಸುತ್ತಿದ್ದಾರೆ.
ಅದಲ್ಲದೆ ಶ್ರವಣಬೆಳಗೊಳದಲ್ಲಿರುವ ಚೇತನ್ ಮನೆಯಲ್ಲಿ ಕೂಡ ಎಸ್ಐಟಿ ಅಧಿಕಾರಿಗಳು ಅಧಿಕಾರಿಗಳು ಮಹಜರು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪ್ರಜ್ವಲ್ ಅಶ್ಲೀಲ ವಿಡಿಯೋ ಹಂಚಿಕೆ ಆರೋಪ ಪ್ರೀತಮ್ ಗೌಡ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ.