ಹಾಸನ: ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಳೆನರಸೀಪುರ ಪೊಲೀಸರು ದೇವರಾಜೇಗೌಡನನ್ನು ಜಡ್ಜ್ ಮನೆಯಲ್ಲಿ ಹಾಜರುಪಡಿಸಿದ್ದು, ಇದೀಗ ಪ್ರಿನ್ಸಿಪಲ್ ಸಿಜೆ,ಜೆ ಎಂ ಎಫ್ ಸಿ ಜಡ್ಜ್ ಸಿದ್ದರಾಮ ಎಸ್ ಅವರು ದೇವರಾಜೆಗೌಡಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸಿಪುರದ ನ್ಯಾಯಾಧೀಶರ ಮನೆಯಲ್ಲಿ ಇದೀಗ ಪೊಲೀಸರು ದೇವರಾಜೇಗೌಡನನ್ನು ಹಾಜರುಪಡಿಸಿದ್ದು, ಪ್ರಿನ್ಸಿಪಲ್ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶ ಸಿದ್ಧರಾಮ ಎಸ್ ಅವರ ಮನೆಯಲ್ಲಿ ಬಂಧಿತ ದೇವರಾಜ ಗೌಡನನ್ನ ಹಾಜರುಪಡಿಸಿದ್ದರು ವಿಚಾರ ನಡೆಸಿದ ಸಿದ್ದರಾಮ ಎಸ್ ಅವರು ದೇವರಾಜೇಗೌಡನನ್ನು ಹದಿನಾಲ್ಕು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಏಪ್ರಿಲ್.1ರಂದು ವಕೀಲ ದೇವರಾಜೇಗೌಡ ವಿರುದ್ಧ ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ವಕೀಲ ದೇವರಾಜೇಗೌಡ ವಿರುದ್ಧ ಎಫ್ಐಆರ್ ದಾಖಲಾಗಿತ್ತು.ನಿನ್ನೆ ಈ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ವಕೀಲ ದೇವರಾಜೇಗೌಡ ಅವರನ್ನು ವಶಕ್ಕೆ ಪಡೆದಿದ್ದರು. ಆ ಬಳಿಕ ಹೊಳೆನರಸೀಪುರ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದರು.