ಕೊಡಗು : ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಮೀನಾ ಎನ್ನುವ ಬಾಲಕಿಯನ್ನು ಭೀಕರವಾಗಿ ಕೊಲೆಗಯ್ಯಲಾಗಿತ್ತು. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೊಡಗು ಜಿಲ್ಲಾ ಎಸ್ ಪಿ ಕೆ. ರಾಮರಾಜನ್ ಪ್ರತಿಕ್ರಿಯೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಕೊಡಗು ಎಸ್ ಪಿ ಕೆ ರಾಮರಾಜನ್ ಪ್ರತಿಕ್ರಿಯೆ ನೀಡಿದ್ದು, ಬಾಲಕಿಯನ್ನು ವಿವಾಹವಾಗುವಂತೆ ಪ್ರಕಾಶ್ ಒತ್ತಾಯಿಸುತ್ತಿದ್ದ. ಹಾಗಾಗಿ ನಿಶ್ಚಿತಾರ್ಥವನ್ನು ನಿಶ್ಚಯ ಮಾಡಿದ್ದರು ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಈ ಒಂದು ಸ್ಥಳಕ್ಕೆ ಬಂದು ಬಾಲಕಿಯ ಪೋಷಕರಿಗೆ ಮನವಿ ಮಾಡಿದ್ದರಿಂದ 18 ವರ್ಷದ ನಂತರ ಮದುವೆಗೆ ಎರಡು ಕುಟುಂಬಗಳು ಒಪ್ಪಿದ್ದವು. ವಿವಾಹ ಬದಲು ಮುಂದೆ ಓದುವ ಇಚ್ಛೆಯನ್ನು ಮೃತ ಬಾಲಕಿ ಮೀನಾ ವ್ಯಕ್ತಪಡಿಸಿದ್ದಳು.
ಪ್ರಕಾಶ್ ಅದೇ ದಿನ ವಿವಾಹ ಮಾಡಿಕೊಡುವಂತೆ ಒತ್ತಾಯ ಮಾಡಿದ್ದ. ಇದಕ್ಕೆ ತಾಯಿ ನಿರಾಕರಿಸಿದ್ದರು. ಇದರಿಂದ ಪ್ರಕಾಶ್ ರೊಚ್ಚಿಗೆದ್ದು ಪ್ರಕಾಶ್ ಬಾಲಕಿಯನ್ನು ಕೊಲೆ ಮಾಡಿದ್ದಾನೆ. ವಿವಾಹಕ್ಕೆ ತಂದೆಯೇ ಅಡ್ಡಗಾಲು ಎಂದು ಪ್ರಕಾಶ್ ಆಕ್ರೋಶ ಹೊರಹಾಕಿದ್ದಾನೆ.ಇದಕ್ಕಾಗಿ ಅಪ್ಪನನ್ನು ಮುಗಿಸಲು ಪ್ರಕಾಶ್ ಕೋವಿ ತೆಗೆದುಕೊಂಡು ಹೋಗಿದ್ದ ಎಂದು ತಿಳಿದುಬಂದಿದೆ.
ಕೊಲೆಯಾದ ರಾತ್ರಿ ಬಾಲಕಿ ಮನೆಗೆ ಮತ್ತೆ ಹತ್ಯೆ ಮಾಡಲು ಹೋಗಿದ್ದ. ಬಾಲಕಿಯ ತಂದೆ ಹಾಗೂ ಅಕ್ಕನನ್ನು ಕೂಡ ಕೊಲೆ ಮಾಡಲು ಪ್ರಕಾಶ್ ಪ್ಲಾನ್ ಮಾಡಿದ ಬಂದಿದ್ದ ಆರೋಪಿ ಪ್ರಕಾಶ್ ನಿಂದ ಒಂದು ಕೋವಿಯನ್ನು ಇದೀಗ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಡಿಕೇರಿಯಲ್ಲಿ ಕೊಡಗು ಎಸ್ ಪಿ ಕೆ ರಾಮರಾಜನ್ ಹೇಳಿಕೆ ನೀಡಿದರು.