ಬೆಂಗಳೂರು: ಎಸ್ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಕೆಲ ದಿನಗಳ ಹಿಂದೆ ಪ್ರಕಟವಾಗಿತ್ತು. ಈ ಬಾರಿಯೂ ವಿದ್ಯಾರ್ಥಿಗಳೇ ಮೇಲು ಗೈ ಸಾಧಿಸಿದ್ದರು. ಈ ಬೆನ್ನಲ್ಲೇ ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ವೇಳಾಪಟ್ಟಿ, ನೋಂದಣಿಗಾಗಿ ಅರ್ಜಿಯನ್ನು ನೀಡಲಾಗಿದೆ. ಸೋ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳೋ ಬಗ್ಗೆ ಮಹತ್ವದ ಮಾಹಿತಿಯನ್ನು ಮುಂದೆ ಓದಿ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಪರೀಕ್ಷೆಗಳ ನಿರ್ದೇಶಕರಾದಂತ ಹೆಚ್.ಎನ್ ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ. ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮ ಪಡಿಸಿಕೊಳ್ಳುವ ಮತ್ತು ಅನುತ್ತೀರ್ಣ ವಿದ್ಯಾರ್ಥಿಗಳು ಪಾವತಿಸಬೇಕಾಗಿರುವ ಪರೀಕ್ಷಾ ಶುಲ್ಕ ಒಂದು ವಿಷಯಕ್ಕೆ ರೂ.407, ಎರಡು ವಿಷಯಕ್ಕೆ ರೂ.507, ಮೂರು ಅಥವಾ ಅಧಕ್ಕಿಂತ ಮೇಲ್ಪಟ್ಟ ವಿಷಯಕ್ಕೆ ರೂ.686 ಆಗಿದೆ ಎಂದಿದ್ದಾರೆ.
ಹೀಗಿವೆ ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ನೋಂದಣಿ ದಿನಾಂಕಗಳು
- ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಲು ದಿನಾಂಕ 09-05-2024ರಿಂದ ಆರಂಭಗೊಳ್ಳಲಿದೆ.
- ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಲು ಕೊನೆಯ ದಿನ ದಿನಾಂಕ 16-05-2024 ಆಗಿರುತ್ತದೆ ಎಂದಿದ್ದಾರೆ.
- ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ದಿನಾಂಕ 18-05-2024ರವರೆಗೆ ಅವಕಾಶ ನೀಡಲಾಗಿದೆ.
- ಕ್ರಮ ಸಂಖ್ಯೆ-3ರಂತೆ ಚಲನ್ ಮುದ್ರಿಸಿಕೊಂಡು ಬ್ಯಾಂಕ್ ಗೆ ಜಮೆ ಮಾಡಲು ಕೊನೆಯ ದಿನ ದಿನಾಂಕ 20-05-2024 ಆಗಿದೆ.
- 2002 ಮತ್ತು ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪುನರಾವರ್ತಿತ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ಹಳೆಯ ಪದ್ದತಿಯಂತೆ ಮಂಡಳಿಯ ನೆಫ್ಟ್ ಚಲನ್ ಮೂಲಕ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಾವತಿಸಲು ನಿಗದಿಪಡಿಸಿದ ಅಂತಿಮ ದಿನಾಂಕ 20-05-2024 ಆಗಿದೆ.
BREAKING: ಮಹಿಳೆಗೆ ‘ಲೈಂಗಿಕ ಕಿರುಕುಳ’ ಕೇಸ್: ವಿಚಾರಣೆ ಬಳಿಕ ‘ವಕೀಲ ದೇವರಾಜೇಗೌಡ ಬಂಧನ’
‘ತಾಯಿಯಾಗುವುದು’ ಸಹಜ ವಿದ್ಯಮಾನ : ಉದ್ಯೋಗಿಗೆ ಹೆರಿಗೆ ಬಾಕಿ ಪಾವತಿಸಲು ಕೋರ್ಟ್ ಆದೇಶ