ಬೆಂಗಳೂರು : ಕಾಂಗ್ರೆಸ್ ಸರ್ಕಾರ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದೆ. ಬಹಳ ದಿನ ಈ ಸರ್ಕಾರ ಉಳಿಯುವುದಿಲ್ಲ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಅಶೋಕ್ ಭವಿಷ್ಯ ನುಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ, ಅಶಾಂತಿ ಸೃಷ್ಟಿಯಾಗಿದೆ. ಅಲ್ಲದೆ ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರ ಬಹಳ ಕಿರುಕುಳ ಕೊಡುತ್ತಿದೆ.ಇದನ್ನು ನಾವು ಖಂಡಿಸುತ್ತೇವೆ. ಇದರ ವಿರುದ್ಧವಾಗಿ ನಾವು ಹೋರಾಟ ಮಾಡುತ್ತೇವೆ.ಸರ್ಕಾರ ದುರಂಕಾರದಿಂದ ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರ ಕಿರುಕುಳ ನೀಡುತ್ತಿದೆ.ಕಾಂಗ್ರೆಸ್ ಸರ್ಕಾರ ಹೀಗಾಗಿ ಕೊನೆಯ ದಿನಗಳನ್ನು ಏನಿಸುತ್ತಿದೆ.ಬಿಜೆಪಿ ಕಾರ್ಯಕರ್ತರ ಮೇಲೆ ಕಿರುಕುಳ ನೀಡುವುದು ಅಕ್ರಮ ಅಪರಾಧ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ರೂ.6,000 ವೋಟ್ ಬಂದಿಲ್ಲ ಅಂದರೆ ಸರ್ಕಾರ ಇರುವುದಿಲ್ಲ ಅಂತ ಹೇಳಿದ್ದಾರೆ ಡಿಕೆ ಶಿವಕುಮಾರ್ ಅವರು ಕೂಡ ಮಂಡ್ಯದಲ್ಲಿ ಅದೇ ರೀತಿ ಹೇಳಿಕೆ ನೀಡಿದ್ದಾರೆ. ಗ್ಯಾರಂಟಿ ಗಳಿಂದ ರಾಜ್ಯದಲ್ಲಿ ಯಾವುದೇ ರೀತಿಯಾದಂತಹ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ರಸ್ತೆಗಳು ಅಭಿವೃದ್ಧಿಯ ಗೊತ್ತಿಲ್ಲ ಶಾಲೆಗಳ ಹೊಸ ಘಟನೆ ಗೊತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಅಶೋಕ್ ಅವರು ವಾಗ್ದಾಳಿ ನಡೆದರೂ.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಏನು ಮಾತಿನ ಯುದ್ಧ ನಡೆಯುತ್ತಿದೆ ಎಲ್ಲಿಗೆ ಹೋಗಿ ಮುಟ್ಟುತ್ತೋ ನನಗಂತೂ ಗೊತ್ತಿಲ್ಲ ಇದು ಇಬ್ಬರ ನಡುವೆ ವೈಯಕ್ತಿಕ ವಾಕ್ ಸಮರ.ಇಬ್ಬರ ನಡುವೆ ಬಹಳ ವಾಕ್ಸಮರ ನಡೆಯುತ್ತಿದೆ. ಇವರ ಕುಟುಂಬ ಜಗಳದಲ್ಲಿ ಬಿಜೆಪಿ ಎಂಟ್ರಿ ಆಗಲ್ಲ ಜನ ಅಭಿವೃದ್ಧಿ ಕೇಳುತ್ತಿದ್ದಾರೆ ಕಾಂಗ್ರೆಸ್ಗೆ ಅಭಿವೃದ್ಧಿ ಬೇಕಿಲ್ಲ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಅದರಲ್ಲಿ ಎರಡು ಮಾತಿಲ್ಲ.