ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೌಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಇಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಹೊಳೆನರಸೀಪುರ ನಿವಾಸದಲ್ಲಿ ಸಂತ್ರಸ್ತೆಯೊಂದಿಗೆ ತೆರಳಿದ್ದಂತ ಎಸ್ಐಟಿ ಅಧಿಕಾರಿಗಳು, ಸ್ಥಳ ಮಹಜರು ನಡೆಸಿದ್ದರು. ಈಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ನಿವಾಸಕ್ಕೂ ಆಗಮಿಸಿದ್ದಾರೆ. ಕಾರಣ ಹೆಚ್.ಡಿ ರೇವಣ್ಣ ಅವರು ದೇವೇಗೌಡ ನಿವಾಸದಲ್ಲಿ ಇರೋ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಮಾಹಿತಿ ದೊರೆತಿರೋದಾಗಿದೆ. ಹೀಗಾಗಿ ಹುಡುಕಾಡೋದಕ್ಕಾಗಿ ಆಗಮಿಸಿದ್ದರು. ಅಂತಿಮವಾಗಿ ಹೆಚ್.ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿದಂತ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಆದ್ರೇ ಕೋರ್ಟ್ ವಾದ ಪ್ರತಿವಾದವನ್ನು ಆಲಿಸಿದ ನಂತ್ರ, ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ನಕಾರ ವ್ಯಕ್ತ ಪಡಿಸಿತ್ತು.
ಈ ಹಿನ್ನಲೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಬಂಧನದ ಭೀತಿ ಎದುರಾಗಿತ್ತು. ಈ ಹಿನ್ನಲೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ನಿವಾಸದಲ್ಲಿ ಹಡಗಿರೋ ಸಂಶಯ ಎಸ್ಐಟಿ ಅಧಿಕಾರಿಗಳು ವ್ಯಕ್ತ ಪಡಿಸಿದ್ದಾರೆ. ಹೀಗಾಗಿಯೇ ಅವರು ಹೆಚ್.ಡಿ ರೇವಣ್ಣ ಅವರನ್ನು ಬಂಧಿಸೋದಕ್ಕಾಗಿ ಬೆಂಗಳೂರಿನ ಪದ್ಮನಾಭ ನಿವಾಸದಲ್ಲಿರುವಂತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ನಿವಾಸಕ್ಕೆ ಎರಡು ಕಾರುಗಳಲ್ಲಿ ಐವರು ಎಸ್ಐಟಿ ಅಧಿಕಾರಿಗಳು ಆಗಮಿಸಿರೋದಾಗಿ ತಿಳಿದು ಬಂದಿತ್ತು.
ಅರ್ಧಗಂಟೆ ಆದ್ರೂ ಹೆಚ್.ಡಿ ದೇವೇಗೌಡ ಅವರ ನಿವಾಸದ ಬಾಗಿಲು ತೆಗೆದಿರಲಿಲ್ಲ. ಕೊನೆಗೆ ಮನವರಿಕೆಯ ನಂತ್ರ ತೆರೆದಾಗ ಅಲ್ಲಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ. ಅವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಕರೆದೊಯ್ಯುತ್ತಿರೋದಾಗಿ ತಿಳಿದು ಬಂದಿದೆ.
ರಾಜ್ಯ ಸರ್ಕಾರದಿಂದ ‘ಮಾಹಿತಿ ಹಕ್ಕು ಆಯೋಗ’ದ ಹಂಗಾಮಿ ಮುಖ್ಯ ಆಯುಕ್ತರಾಗಿ ‘ಹೆಚ್.ಸಿ.ಸತ್ಯನ್’ ನೇಮಿಸಿ ಆದೇಶ