ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿಲ ತಾಪ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ನಿನ್ನೆಯಂತೂ ದಾಖಲೆಯ 46.70 ಡಿಗ್ರಿ ಸೆಲ್ಸಿಯಸ್ ಯಾದಗಿರಿ ಜಿಲ್ಲೆಯಲ್ಲಿ ದಾಖಲಾಗಿತ್ತು. ಬಿಸಿಲ ತಾಪದ ನಡುವೆಯೂ ಮೇ.7ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಹೀಗಾಗಿ ಮತದಾನದ ಅವಧಿಯನ್ನು ಮೇ.7ರಂದು ಒಂದು ಗಂಟೆ ವಿಸ್ತರಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿದೆ.
ಮೇ.7ರಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಮೊದಲ ಹಂತದ ಮತದಾನದ ವೇಳೆಯಲ್ಲಿ ಕಡಿಮೆಯಿದ್ದಂತ ಬಿಸಿಲು, ಈಗ ತೀವ್ರ ಹೆಚ್ಚಾಗಿದೆ. ಬಹುತೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಮೀರಿದೆ. ಇದರ ನಡುವೆಯೂ ಮೇ.7ರಂದು ಎರಡನೇ ಹಂತದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ.
ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಚುನಾವಣಾ ಆಯೋಗವು ಅವಕಾಶ ನೀಡಿದೆ. ಆದ್ರೇ ತೀವ್ರ ಬಿಸಿಲ ಕಾರಣ ಮಧ್ಯಾಹ್ನದ ವೇಳೆಯಲ್ಲಿ ಮತದಾರರು ಮತ ಚಲಾಯಿಸೋದಕ್ಕೆ ಬರೋದು ಕಡಿಮೆ ಇದೆ. ಮತದಾನವು ಬಿಸಿಲ ಬೇಗೆಯ ತಾಪಮಾನದ ಕಾರಣಕ್ಕೆ ಕುಂಠಿತಗೊಳ್ಳಬಹುದು. ಹೀಗಾಗಿ 1 ಗಂಟೆ ಮತದಾನದ ಅವಧಿಯನ್ನು ವಿಸ್ತರಿಸುವಂತೆ ಬಿಜೆಪಿ ನಿಯೋಗವು ಚುನಾವಣಾ ಆಯೋಗಕ್ಕೆ ಪತ್ರದಲ್ಲಿ ಮನವಿ ಮಾಡಿದೆ. ಈ ಮನವಿಗೆ ಯಾವ ರೀತಿಯಲ್ಲಿ ಚುನಾವಣಾ ಆಯೋಗ ಪ್ರತಿಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಅಕ್ರಮ ಕಲ್ಲು ಗಣಿಗಾರಿಕೆ: ಕೇಂದ್ರ ಸಚಿವ ಭಗವಂತ ಖೂಬಾಗೆ 25 ಕೋಟಿ ದಂಡ, ಗಣಿ ಇಲಾಖೆ ನೋಟಿಸ್
BREAKING : ಲೋಕಸಭಾ ಚುನಾವಣೆ : ರಾಯ್ ಬರೇಲಿ ಕ್ಷೇತ್ರದಿಂದ ‘ರಾಹುಲ್ ಗಾಂಧಿ’ ನಾಮಪತ್ರ ಸಲ್ಲಿಕೆ