ನವದೆಹಲಿ: ಪುಷ್ಪಾ ಮತ್ತು ಅನಿಮಲ್ ಚಿತ್ರಗಳಲ್ಲಿನ ಅಭಿನಯದಿಂದ ಹೃದಯಗಳನ್ನು ಕದ್ದ ದಕ್ಷಿಣ ಭಾರತದ ತಾರೆ ರಶ್ಮಿಕಾ ಮಂದಣ್ಣ ಕಳೆದ ವರ್ಷದ ಕೊನೆಯಲ್ಲಿ ವಿವಾದದಲ್ಲಿ ಸಿಲುಕಿದ್ದರು. ಆಕೆಯ ಹೋಲಿಕೆಯನ್ನು ಒಳಗೊಂಡಿರುವ ಡೀಪ್ ಫೇಕ್ ವೀಡಿಯೊ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿತು, ಇದು ಸಾಮಾಜಿಕ ತಾಲತಾಣದಲ್ಲಿ ಕೋಲಾಹಲವನ್ನು ಉಂಟುಮಾಡಿತು ಕೂಡ ಇದಲ್ಲದೇ ಆನ್ ಲೈನ್ ಸುರಕ್ಷತೆ ಮತ್ತು ಗೌಪ್ಯತೆ ಬಗ್ಗೆ ಕಳವಳವನ್ನು ಹೆಚ್ಚಿಸಿತು.
ತಂತ್ರಜ್ಞಾನದ ಈ ದುರುಪಯೋಗದ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಂಡ ದೆಹಲಿ ಪೊಲೀಸರು ಅಪರಾಧಿ ಇಮಾನಿ ನವೀನ್ ನನ್ನು ಬಂಧಿಸಿದ್ದಾರೆ. ರಶ್ಮಿಕಾ ಅವರ ಸ್ವಯಂ ಘೋಷಿತ ಅಭಿಮಾನಿಯಾಗಿರುವ ನವೀನ್, ಮೋಸಗೊಳಿಸುವ ವೀಡಿಯೊವನ್ನು ರಚಿಸಲು ಎಐ ಸಾಫ್ಟ್ವೇರ್ ಅನ್ನು ಬಳಸಿದ್ದಾನೆ ಎನ್ನಲಾಗಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ, ದೆಹಲಿ ಪೊಲೀಸರ ವಿಶೇಷ ಸೆಲ್ ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿ ರಶ್ಮಿಕಾ ಅವರ ಹೇಳಿಕೆಯನ್ನು ದಾಖಲಿಸಿದೆ. ನಟಿ ತನಿಖೆಗೆ ಸಹಕರಿಸಿದ್ದಾರೆ, ಈ ಸಮಸ್ಯೆಯನ್ನು ನಿಭಾಯಿಸುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎನ್ನಲಾಗಿದೆ.