ನವದೆಹಲಿ: ಕೋವಿಡ್ ಸಂದರ್ಭದಲ್ಲಿ ಕೊರೋನಾದಿಂದ ರಕ್ಷಣೆಗಾಗಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ವಿವಿ ಅಭಿವೃದ್ಧಿ ಪಡಿಸಿದಂತ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗಿತ್ತು. ಆದ್ರೇ ಈ ಲಸಿಕೆ ಪಡೆದವರಿಗೆ ಅಪರೂಪವಾಗಿ ಅಡ್ಡ ಪರಿಣಾಮದಿಂದ ಕಾಯಿಲೆ ಬರೋದನ್ನು ಕಂಪನಿ ಒಪ್ಪಿಕೊಂಡಿದೆ.
ಈ ಬಗ್ಗೆ ಸ್ವತಹ ಅಸ್ಟ್ರಾಜೆನೆಕಾ ತಪ್ಪು ಒಪ್ಪಿಕೊಂಡಿದ್ದು, ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟೋ ಕಾಯಿಲೆಗೆ ಕಾರಣವಾಗಲಿದೆ. ಅಲ್ಲದೇ ಪ್ಲೇಟ್ ಲೆಟ್ ಕಡಿಮೆಯಾಗೋದಕ್ಕೂ ಕಾರಣವಾಗಬಹುದು ಎಂಬುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿರುವಂತ ದಾಖಲೆಗಳಲ್ಲಿ ಸ್ಪಷ್ಟ ಪಡಿದೆ.
ಇನ್ನೂ ಯುಕೆಯಲ್ಲಿ ಲಸಿಕೆಯನ್ನು ಪಡೆದಂತ ಅನೇಕರು ಸಾವು, ತೀವ್ರತರವಾದ ಗಾಯಗಳಿಗೆ ಒಳಗಾಗಿದ್ದಾರೆ. ಹೀಗಾಗಿ ಅಸ್ಟ್ರಾಜೆನೆಕಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಯುಕೆ ಹೈಕೋರ್ಟ್ ನಲ್ಲಿ 51 ಪ್ರಕರಣಗಳು ಈ ಸಂಬಂಧ ದಾಖಲಾಗಿದ್ದವು. ಅಲ್ಲದೇ 100 ಮಿಲಿಯನ್ ಪೌಂಡ್ ಗಳವರೆಗೆ ಪರಿಹಾರ ಕೋರಿದ್ದರು.
ಯುಕೆ ನ್ಯಾಯಾಲಯಕ್ಕೆ ಕೋವಿಶೀಲ್ಡ್ ಅಡ್ಡ ಪರಿಣಾಮಗಳ ಬಗ್ಗೆ ಅಸ್ಟ್ರಾಜೆನೆಕಾ ಕಂಪನಿ ದಾಖಲೆಯನ್ನು ಸಲ್ಲಿಸಿದ್ದು, ಅದರಲ್ಲಿ ಲಸಿಕೆಯು ಅಪರೂಪದ ಅಡ್ಡ ಪರಿಣಾಮಗಳಿಗೆ ಕಾರಣವಾಗಲಿದೆ ಎಂದು ಒಪ್ಪಿಕೊಂಡಿದೆ. ಅಲ್ಲದೇ ರಕ್ತ ಹೆಪ್ಪುಗಟ್ಟೋದು, ಪ್ಲೇಟ್ ಲೇಟ್ ಕಡಿಮೆಯಾಗುವಂತ ಕಾಯಿಲೆಗೆ ಕಾರಣವಾಗಬಹುದು ಎಂದು ದಾಖಲೆ ಸಲ್ಲಿಸಿದೆ. ಈ ಮೂಲಕ ಕೋವಿಶೀಲ್ಡ್ ಲಸಿಕೆಯನ್ನು ಪಡೆದವರಿಗೆ ಶಾಕಿಂಗ್ ನ್ಯೂಸ್ ನೀಡಿದೆ.
ಪ್ರಜ್ವಲ್ ಪ್ರಕರಣ; ಪ್ರಧಾನಿ ಮೋದಿ, ದೇವೇಗೌಡರ ಕುಟುಂಬವೇ ನೇರ ಹೊಣೆ: ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ
2030ರ ವೇಳೆಗೆ ಭಾರತದ ಸೇವೆಗಳ ರಫ್ತು 800 ಬಿಲಿಯನ್ ಡಾಲರ್ ಗೆ ಏರಿಕೆ : ಗೋಲ್ಡ್ಮನ್ ಸ್ಯಾಚ್ಸ್ ವರದಿ