Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯೋಗೀಶ್ ಗೌಡ ಕೊಲೆ ಪ್ರಕರಣ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂನ್ 1ಕ್ಕೆ ಮುಂದೂಡಿದ ಹೈಕೋರ್ಟ್

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೆನ್ ಡ್ರೈವ್ ಪ್ರಕರಣದ ಬಗ್ಗೆ ಬಿಜೆಪಿ, ಎನ್ ಡಿಎ ಮೈತ್ರಿ ನಿಲುವೇನು: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ
KARNATAKA

ಪೆನ್ ಡ್ರೈವ್ ಪ್ರಕರಣದ ಬಗ್ಗೆ ಬಿಜೆಪಿ, ಎನ್ ಡಿಎ ಮೈತ್ರಿ ನಿಲುವೇನು: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

By ವಸಂತ ಬಿ ಈಶ್ವರಗೆರೆ

ಬೆಳಗಾವಿ/ಕೂಡ್ಲಗಿ : “ಪೆನ್ ಡ್ರೈವ್ ವಿಚಾರದಲ್ಲಿ ನಾವು ಜೆಡಿಎಸ್ ಪಕ್ಷದವರನ್ನು ಪ್ರಶ್ನೆ ಮಾಡುವುದಿಲ್ಲ. ಬಿಜೆಪಿ ಹಾಗೂ ಈ ವಿಚಾರದಲ್ಲಿ ಎನ್ ಡಿಎ ನಿಲುವೇನು ಎಂದು ತಿಳಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೇಳಿದರು.

ಬೆಳಗಾವಿಯಲ್ಲಿ ಮತ್ತು ಕೂಡ್ಲಗಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದಂತ ಅವರು, “ಪ್ರಜ್ವಲ್ ಅವರನ್ನು ಜೆಡಿಎಸ್ ನಿಂದ ಉಚ್ಛಾಟನೆ ಮಾಡಿರುವುದು ಅವರ ಪಕ್ಷ ಹಾಗೂ ಕುಟುಂಬದ ವಿಚಾರ. ಆದರೆ ಈ ಹಗರಣದ ಹಿನ್ನೆಲೆಯಲ್ಲಿ ಮೈತ್ರಿ ಬಗ್ಗೆ ತಮ್ಮ ನಿಲುವೇನು ಎಂಬುದರ ಬಗ್ಗೆ ಬಿಜೆಪಿ ಹಾಗೂ ಎನ್ ಡಿಎ ನಾಯಕರು ಉತ್ತರ ನೀಡಬೇಕು” ಎಂದರು.

ಪೆನ್ ಡ್ರೈವ್ ವಿಚಾರವಾಗಿ ತನಿಖೆಯಾಗಲಿ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರ ನಮ್ಮ ನಿಯಂತ್ರಣದಲ್ಲಿ ಇಲ್ಲ. ಏನೇ ಇದ್ದರು ತನಿಖಾಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕರಾದ ಆರ್.ಅಶೋಕ್, ವಿಜಯೇಂದ್ರ ನುಣುಚಿಕೊಳ್ಳಬಾರದು. ಕುಮಾರಸ್ವಾಮಿ, ಅವರ ಕುಟುಂಬ ಹಾಗೂ ಅವರ ಪಕ್ಷದವರು ಏನಾದರೂ ಮಾಡಿಕೊಳ್ಳಲಿ” ಎಂದರು.

ಬೆಳಗಾವಿಯಲ್ಲಿ ಭಾನುವಾರ ಮಾತನಾಡಿದ್ದ ಪ್ರಧಾನಮಂತ್ರಿಗಳು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಾಶವಾಗಿದೆ ಎಂದು ಆರೋಪಿಸಿದ್ದ ಬಗ್ಗೆ ಕೇಳಿದಾಗ, “ಪ್ರಧಾನಮಂತ್ರಿಗಳು ಯಾವ ರೀತಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ ಅತ್ಯುತ್ತಮವಾಗಿದೆ. ಈ ಕಾರಣಕ್ಕೆ ನಮ್ಮ ರಾಜ್ಯಕ್ಕೆ ಜನ ಬಹಳ ಉತ್ಸುಕತೆಯಿಂದ ಬರುತ್ತಿದ್ದಾರೆ. ಈ ಕಾರಣಕ್ಕೆ ವಾಜಪೇಯಿ ಅವರು ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ಭಾರತದ ಇತರೆ ನಗರಗಳಿಗೆ ಹೋಗುತ್ತಿದ್ದಾರೆ ಎಂದಿದ್ದರು. ನಿಮಗೆ ಮತ ಸಿಗಲಿಲ್ಲ ಎಂದು ಕರ್ನಾಟಕ ರಾಜ್ಯದ ಬಗ್ಗೆ ಸುಳ್ಳು ಮಾತನಾಡಿದರೆ ಅದು ಭಾರತಕ್ಕೆ ಮಾಡುವ ಅಪಮಾನ. ವಿದೇಶಿಗರು ಕರ್ನಾಟಕದ ಮೂಲಕ ಭಾರತವನ್ನು ನೋಡುತ್ತಿದ್ದಾರೆ. ದೇಶದಲ್ಲೇ ಅತ್ಯುತ್ತಮ ಆಡಳಿತ ಹಾಗೂ ಪೊಲೀಸ್ ವ್ಯವಸ್ಥೆ ಇರುವ ರಾಜ್ಯ ಕರ್ನಾಟಕ” ಎಂದರು.

ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರಿಂದ ಯಾವ ರೀತಿ ಪ್ರಕ್ರಿಯೆ ಬರುತ್ತಿದೆ ಎಂದು ಕೇಳಿದಾಗ, “ಕಾಂಗ್ರೆಸ್ ಪಕ್ಷ ದಕ್ಷಿಣ ಭಾಗದ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲಿದ್ದು, ಉತ್ತರ ಭಾಗದ ಕ್ಷೇತ್ರಗಳಲ್ಲೂ ಭರ್ಜರಿ ಜಯ ಸಾಧಿಸಲಿದೆ. ಉತ್ತರ ಕ್ಷೇತ್ರಗಳಲ್ಲಿ ಜನ ನಮಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಸಂಸತ್ ಸ್ಥಾನಗಳಲ್ಲಿ ನಾವು ಈ ಹಿಂದಿನ ದಾಖಲೆ ಮುರಿಯುತ್ತೇವೆ” ಎಂದರು.

ಪ್ರಜ್ವಲ್ ರೇವಣ್ಣ ಪರಾರಿಯಾಗಿರುವ ಬಗ್ಗೆ ಕೇಳಿದಾಗ, “ಪ್ರಜ್ವಲ್ ರೇವಣ್ಣ ಅವರ ವಿಚಾರವನ್ನು ತನಿಖಾಧಿಕಾರಿಗಳು ನೋಡಿಕೊಳ್ಳುತ್ತಾರೆ. ಈ ಬಗ್ಗೆ ನೀವು ನನ್ನನ್ನು ಪ್ರಶ್ನಿಸುವ ಬದಲು ಬಿಜೆಪಿ ನಾಯಕರನ್ನು ಪ್ರಶ್ನಿಸಿ. ಈ ಭಾಗದ ಬಿಜೆಪಿ ನಾಯಕರ ನಿಲುವು ಏನು ಎಂದು ತಿಳಿಸಲಿ” ಎಂದರು.

‘ಸಕಲ ಸರ್ಕಾರಿ ಗೌರವ’ಗಳೊಂದಿಗೆ ‘ಸಂಸದ ವಿ.ಶ್ರೀನಿವಾಸ್ ಪ್ರಸಾದ್’ ಅಂತ್ಯ ಸಂಸ್ಕಾರಕ್ಕೆ ‘ರಾಜ್ಯ ಸರ್ಕಾರ’ ಆದೇಶ

‘ಸಕಲ ಸರ್ಕಾರಿ ಗೌರವ’ಗಳೊಂದಿಗೆ ‘ಸಂಸದ ವಿ.ಶ್ರೀನಿವಾಸ್ ಪ್ರಸಾದ್’ ಅಂತ್ಯ ಸಂಸ್ಕಾರಕ್ಕೆ ‘ರಾಜ್ಯ ಸರ್ಕಾರ’ ಆದೇಶ

Share. Facebook Twitter LinkedIn WhatsApp Email

Related Posts

ಯೋಗೀಶ್ ಗೌಡ ಕೊಲೆ ಪ್ರಕರಣ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂನ್ 1ಕ್ಕೆ ಮುಂದೂಡಿದ ಹೈಕೋರ್ಟ್

1 Min Read

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

1 Min Read

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

2 Mins Read
Recent News

ಯೋಗೀಶ್ ಗೌಡ ಕೊಲೆ ಪ್ರಕರಣ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂನ್ 1ಕ್ಕೆ ಮುಂದೂಡಿದ ಹೈಕೋರ್ಟ್

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

BREAKING : ಬೆಂಗಳೂರಿನ ಅಂಚೆ ಕಚೇರಿಗೆ ಪಾರ್ಸೆಲ್ ನಲ್ಲಿ ಬಂತು ಹೈಡ್ರೋಗಾಂಜಾ : 3 ಕೋಟಿ ಮೌಲ್ಯದ ಗಾಂಜಾ ಜಪ್ತಿ

State News
KARNATAKA

ಯೋಗೀಶ್ ಗೌಡ ಕೊಲೆ ಪ್ರಕರಣ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂನ್ 1ಕ್ಕೆ ಮುಂದೂಡಿದ ಹೈಕೋರ್ಟ್

By ಸುರೇಶ್‌ KARNATAKA 1 Min Read

ಧಾರವಾಡ : ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಕ್ಷೆ ಅಮಾನತ್ತಿನಲ್ಲಿ ಇಟ್ಟು ಜಾಮೀನು ಕೋರಿ…

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

BREAKING : ಬೆಂಗಳೂರಿನ ಅಂಚೆ ಕಚೇರಿಗೆ ಪಾರ್ಸೆಲ್ ನಲ್ಲಿ ಬಂತು ಹೈಡ್ರೋಗಾಂಜಾ : 3 ಕೋಟಿ ಮೌಲ್ಯದ ಗಾಂಜಾ ಜಪ್ತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.