ನವದೆಹಲಿ: ಓಲಾ ಕ್ಯಾಬ್ ಸಿಇಒ ಹುದ್ದೆಗೆ ಹೇಮಂತ್ ಬಕ್ಷಿ ಅವರು ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಓಲಾ ಕಂಪನಿಯಿಂದ ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ.
ಓಲಾ ಕ್ಯಾಬ್ಸ್ ಸಿಇಒ ಹೇಮಂತ್ ಬಕ್ಷಿ ಅವರು ಕೆಲಸಕ್ಕೆ ಸೇರಿದ ನಾಲ್ಕು ತಿಂಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಮನಿಕಂಟ್ರೋಲ್ ವರದಿಯ ಪ್ರಕಾರ, ಕಂಪನಿಯು ಪುನರ್ರಚನೆ ಮಾಡಲು ಯೋಚಿಸುತ್ತಿದೆ. ಶೇಕಡಾ 10 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ.