ಹುಬ್ಬಳ್ಳಿ: ಎಂಸಿಎ ವಿದ್ಯಾರ್ಥಿನಿ ನೇಹಾ ಬರ್ಬರ ಹತ್ಯೆ ಪ್ರಕರಣ ಸಂಬಂಧ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯ ನಿರಂಜನ ಹಿರೇಮಠ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಇಂದು ಹುಬ್ಬಳ್ಳಿ ನಗರದ ಬಿಡನಾಳದಲ್ಲಿರುವಂತ ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ ಅವರ ಮನೆಗೆ ಸಿಎಂ ಸಿದ್ಧರಾಮಯ್ಯ ಭೇಟಿ ನೀಡಿದರು. ನೇಹಾ ಹಿರೇಮಠ ಅವರ ತಂದೆ, ತಾಯಿಗಳಿಗೆ ಸಿಎಂ ಸಿದ್ಧರಾಮಯ್ಯ ಸಾಂತ್ವಾನ ಹೇಳಿದರು.
ಇದೇ ಸಂದರ್ಭದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ನೇಹಾ ಹಿರೇಮಠ ಅವರ ಹತ್ಯೆ ಸಂಬಂಧ ತಂದೆ ನಿರಂಜನ ಹಿರೇಮಠ ಅವರಿಂದ ಮಾಹಿತಿಯನ್ನು ಪಡೆದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಚಿವರಾದಂತ ಸಂತೋಷ್ ಲಾಡ್, ಹೆಚ್.ಕೆ ಪಾಟೀಲ್ ಹಾಗೂ ಶಾಸಕರಾದಂತ ಪ್ರಸಾದ್ ಅಬ್ಬಯ್ಯ, ಎನ್ ಹೆಚ್ ಕೋನರೆಡ್ಡಿ ಅವರು ಸಾಥ್ ನೀಡಿದರು.
‘ಮತದಾರರೇ, ಮತಗಟ್ಟೆ ಅಧಿಕಾರಿ’ಗಳೇ ಗಮನಿಸಿ: ನಾಳೆ ‘ಮತದಾನ ಕೇಂದ್ರ’ದಲ್ಲಿ ‘ಮೊಬೈಲ್ ಬಳಕೆ’ಗೆ ಅವಕಾಶವಿಲ್ಲ
BREAKING : ದೆಹಲಿ ಸಿಎಂ ‘ಅರವಿಂದ್ ಕೇಜ್ರಿವಾಲ್’ ಅಬಕಾರಿ ನೀತಿ ಹಗರಣದ ‘ಕಿಂಗ್ ಪಿನ್’ : ED