ಬೆಂಗಳೂರು : ಬಿಜೆಪಿ ವಿರುದ್ಧ ಕಾಂಗ್ರೆಸ್ ಚೊಂಬು ಜಾಹಿರಾತು ಪ್ರಕಟ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು ನಿಮ್ಮ ಯೋಗ್ಯತೆಗೆ 11 ತಿಂಗಳಲ್ಲಿ ಒಂದು ಚೊಂಬು ನೀರು ಕೊಡಲು ಆಗಲಿಲ್ಲ ಎಂದು ಕಿಡಿಕಾರಿದರು.
WATCH VIDEO: ಮಣಿಪುರದಲ್ಲಿ ಚುನಾವಣೆ ಬೂತ್ ಬಳಿ ದುಷ್ಕರ್ಮಿಗಳ ಗುಂಡಿನ ದಾಳಿ, 3 ಮಂದಿ ಸಾವು ವಿಡಿಯೋ ವೈರಲ್
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಷ್ಟು ಜನರಿಗೆ ಚೊಂಬು ಕೊಟ್ಟಿದೆ ಎಂದು ಮೋದಿ ಹೇಳಿದ್ದಾರೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಕೊಡಲಿಲ್ಲ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ಕುರಿತಂತೆ ಕಾಂಗ್ರೆಸ್ ವಾಗ್ದಾಳಿ ನಡೆಸಿದರು.
10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿಕೊಡಲಿಲ್ಲ. ಅದು ಚೋಬ? ಬರಕ್ಕೆ 5000 ಕೋಟಿ ಕೊಡುತ್ತೇವೆ ಎಂದು ಕೊಡಲಿಲ್ಲ ಅದು ಚೋಬ? ಬಜೆಟ್ ನಲ್ಲಿ ಸರ್ವಜನಾಂಗದ ಶಾಂತಿಯ ತೋಟ ಅಂತ ಹೇಳಿದರು.ಈಗ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗೃಹ ಸಚಿವರು ಇದ್ದಾರೆ ಇಲ್ಲವೋ ಅಂತ ಜನರು ಹುಡುಕುತ್ತಿದ್ದಾರೆ ಎಂದರು.
ಭ್ರೂಣದ ಅಸಹಜತೆ: 28 ವಾರಗಳ ಗರ್ಭಧಾರಣೆಯನ್ನು ಕೊನೆಗೊಳಿಸಲು ಅಪ್ರಾಪ್ತ HIV ಪಾಸಿಟಿವ್ ಹುಡುಗಿಗೆ ಹೈಕೋರ್ಟ್ ಅನುಮತಿ
ಕೃಷ್ಣೆಯ ಕಣ್ಣೀರು ಅಂತ ಐದು ರೂಪಾಯಿ ಕೊಟ್ಟಿಲ್ಲ ಇದು ಚೊಂಬು ಅಲ್ವೇ? ನಿಮ್ಮ ಯೋಗ್ಯತೆಗೆ 11 ತಿಂಗಳಿನಲ್ಲಿ ಒಂದು ಚೆಂಬು ನೀರು ಕೂಡ ಕೊಟ್ಟಿಲ್ಲ. ಕೇರಳದವರು ಬಿಂದಿಗೆಯಲ್ಲಿ ನೀರು ಕೊಡುತ್ತೇವೆ ಎಂದು ಕರೆಯುತ್ತಿದ್ದಾರೆ. ಕಾಂಗ್ರೆಸ್ನವರು ಈ ಚೊಂಬು ಹಿಡಿದುಕೊಂಡು ಕೇರಳಕ್ಕೆ ಹೋಗಲಿ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.