ಬೆಂಗಳೂರು : ಚುನಾವಣಾ ಕರ್ತವ್ಯದಿಂದ ಫಾರ್ಮಸಿ ಅಧಿಕಾರಿಗಳಿಗೆ ವಿನಾಯಿತಿ ಇದೆ ಎಂದು ಹೇಳಿದ ಹೈಕೋರ್ಟ್, ಇದೀಗ ಬಿಬಿಎಂಪಿ ಹೊರಡಿಸಿರುವ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಮಧ್ಯಂತರ ಆದೇಶ ಹೊರಡಿಸಿದೆ. ಚುನಾವಣೆ ಕರ್ತವ್ಯಕ್ಕೆ ಹಾಜರಾಗುವಂತೆ ಬಿಬಿಎಂಪಿ ನೀಡಿದ ಆದೇಶಕ್ಕೆ ಇದೀಗ ಹೈಕೋರ್ಟ್ ತಡೆ ನೀಡಿದೆ.
ನಿಯಮದಲ್ಲಿ ವೈದ್ಯರು ನರಸ ಫಾರ್ಮಸಿ ಅಧಿಕಾರಿಗಳಿಗೆ ವಿನಾಯತಿ ಇದೆ. ಆದರೂ ಬಿಬಿಎಂಪಿಯಿಂದ ಕಾನೂನು ಬಾಹಿರ ಸೂಚನೆ ಎಂದು ಅರ್ಜಿದಾರರ ಪರ ವಕೀಲ ಬಿಎಮ್ ಸಂತೋಷ್ ವಾದಿಸಿದ್ದರು.
ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸುವಾಗ ಕಾನೂನು ಪಾಲಿಸಿ ಬಿಬಿಎಂಪಿ ಚುನಾವಣಾ ಅಧಿಕಾರಿಗಳಿಗೆ ಹೈ ಕೋರ್ಟ್ ಈ ಕುರಿತಂತೆ ಸೂಚನೆ ನೀಡಿ, ಚುನಾವಣೆ ಕರ್ತವ್ಯಕ್ಕೆ ಹಾಜರಾಗುವಂತೆ ಬಿಬಿಎಂಪಿ ನೀಡಿದ ಆದೇಶಕ್ಕೆ ಇದೀಗ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.