ಬೆಂಗಳೂರು : ಲೋಕಸಭೆ ಚುನಾವಣೆಗೆ ತಮ್ಮ ಮಗನಿಗೆ ಟಿಕೆಟ್ ಸಿಗಲಿಲ್ಲವೆಂದು ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಈ ವಿಚಾರವಾಗಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿರುವ ರಾಧಾಮೋಹನ್ದಾಸ್ ಅಗರ್ವಾಲ್ ಅವರು ಈಶ್ವರಪ್ಪ ಅವರು ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವ ವಿಶ್ವಾಸವಿದೆ ಎಂದು ತಿಳಿಸಿದರು.
BREAKING : ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ‘ಅಪಹರಣ’ ಆರೋಪ : ‘FIR’ ದಾಖಲು
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಪಕ್ಷಕ್ಕಾಗಿ ಶ್ರಮಪಟ್ಟಿದ್ದಾರೆ. ಮಗನಿಗೆ ಟಿಕೆಟ್ ಕೇಳಿದ್ದರು ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ ಅಗರ್ವಾಲ್ ತಿಳಿಸಿದರು. ಈಶ್ವರಪ್ಪ ಕೇಳಿದ್ದ ಕ್ಷೇತ್ರದಲ್ಲಿ ಬಸವರಾಜ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ.ಬಸವರಾಜ ಬೊಮ್ಮಾಯಿ ಇಷ್ಟು ವರ್ಷ ರಾಜ್ಯದ ಸೇವೆ ಮಾಡಿದ್ದರು ಈಗ ಅವರನ್ನು ದೆಹಲಿಗೆ ಕರೆಸಿಕೊಳ್ಳಲು ತೀರ್ಮಾನವಾಗಿದೆ ಎಂದರು.
‘ಮೋದಿ’ ಬಂದ ಮೇಲೆ ಕೆಂದ್ರದಲ್ಲಿ ‘ಸಮ್ಮಿಶ್ರ ಸರ್ಕಾರ’ದ ಕಾಲ ಮುಗಿದಿದೆ: ಬಸವರಾಜ ಬೊಮ್ಮಾಯಿ
ಕೆಎಸ್ ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದರು ಮೋದಿ ಅವರನ್ನು ವಿರೋಧಿಸಿಲ್ಲ ಗೆದ್ದರೆ ಬಿಜೆಪಿ ಸೇರುತ್ತೇನೆ ಅಂತ ಕೆಎಸ್ ಈಶ್ವರಪ್ಪ ಘೋಷಣೆ ಮಾಡಿದ್ದಾರೆ ನಾಮಪತ್ರ ಹಿಂಪಡೆಯುವವರಿಗೆ ನಮ್ಮ ವಿರೋಧಿ ಅಂತ ಭಾವಿಸಲ್ಲ ಈಶ್ವರಪ್ಪ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.