ದಾವಣಗೆರೆ : ಸಂಸದ ಜಿಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅಡುಗೆ ಮಾಡಲಿಕ್ಕೆ ಲಾಯಕ್ಕು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಶಾಮನವರು ಶಿವಶಂಕರಪ್ಪ ಅವರು ಇದೀಗ ಚುನಾವಣೆ ಆಯೋಗಕ್ಕೆ ಪತ್ರ ಬರೆಯುವ ಮೂಲಕ ಸ್ಪಷ್ಟನೆ ನೀಡಿದ್ದು, ನನಗೆ ಆಗದವರು ದ್ವೇಷದಿಂದ ಹೇಳಿಕೆಗಳನ್ನು ತಿರುವು ಸೃಷ್ಟಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.
BREAKING : ಟರ್ಕಿ: ‘ಇಸ್ತಾಂಬುಲ್ ನೈಟ್ ಕ್ಲಬ್’ನಲ್ಲಿ ಬೆಂಕಿ ಅವಘಡ : 25 ಮಂದಿ ಸಾವು, 8 ಜನರಿಗೆ ಗಾಯ
ಕಳೆದ ಕೆಲವು ದಿನಗಳ ಹಿಂದೆ ಶಮನೂರು ಶಿವಶಂಕರಪ್ಪ ಅವರು ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಜಿಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ ಈ ಹಿನ್ನೆಲೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅಡುಗೆ ಮಾಡಲಿಕ್ಕೆ ಲಾಯಕ್ಕು ಎಂಬ ಹೇಳಿಕೆ ಕುರಿತಾಗಿ ಉಪಚುನಾವಣಾ ಅಧಿಕಾರಿಗಳು ಶಾಮನೂರು ಶಿವಶಂಕರಪ್ಪ ಅವರಿಗೆ ಹೇಳಿಕೆ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿದ್ದರು ಇದೀಗ ಅವರು ಚುನಾವಣೆ ಆಯೋಗಕ್ಕೆ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ ತಮ್ಮ ಹೇಳಿಕೆ ಬಗ್ಗೆ ಚುನಾವಣಾ ಆಯೋಗಕ್ಕೆ ಶಾಮನೂರು ಶಿವಶಂಕರಪ್ಪ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
BREAKING : ಕ್ಯಾಶ್ ಫಾರ್ ಕ್ವೆರಿ ಪ್ರಕರಣ : TMC ನಾಯಕಿ ‘ಮಹುವಾ ಮೊಯಿತ್ರಾ’ ವಿರುದ್ಧ ‘ED’ ಪ್ರಕರಣ ದಾಖಲು
ನನಗೆ ಆಗದವರು ದ್ವೇಷದಿಂದ ಈ ರೀತಿ ಮಾಡಿದ್ದಾರೆ.ಬಿಜೆಪಿ ಅಭ್ಯರ್ಥಿ ಬಗ್ಗೆ ಹೇಳಿಕೆ ಕೊಟ್ಟಿದ್ದೇನೆ ಎಂದು ಸೃಷ್ಟಿ ಮಾಡಿದ್ದಾರೆ. ಇಂತಹ ಹೇಳಿಕೆ ಕೊಟ್ಟಿದ್ದೇನೆ ಎಂದು ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾರೆ. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಲ್ಲ ಎಂಬುದನ್ನು ನಮ್ಮ ಪಕ್ಷದ ದಿವಂಗತ ಇಂದಿರಾಗಾಂಧಿಯವರು ಸಾಬೀತು ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
‘ಭಾರತದ ಚುನಾವಣಾ ಆಯೋಗ’ದಿಂದ ದೇಶದ ‘ಯೂತ್ ಐಕಾನ್’ ಆಗಿ ನಟ ‘ಆಯುಷ್ಮಾನ್ ಖುರಾನಾ’ ನೇಮಕ
ಅದೇ ರೀತಿ ದಾವಣಗೆರೆ ಕ್ಷೇತ್ರದಲ್ಲೂ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದ್ದು ನಿಮ್ಮ ಸಮಸ್ಯೆ ದೆಹಲಿಗೆ ತಲುಪಿಸುವವರಿಗೆ ಮತ ನೀಡಿ ಎಂದಿದ್ದೇನೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಶಾಮನೂರು ಅವರು ಆರೋಪಿಸಿದ್ದಾರೆ.ಹೇಳಿಕೆ ಬಗ್ಗೆ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಆಕ್ಷೇಪಿಸಿದ್ದರು. ಶಾಮನೂರು ಶಿವಶಂಕರ ಬಗ್ಗೆ ಸಹಾಯಕ ಚುಣವಣಾಧಿಕಾರಿ ಸೂಚಿಸಿದ್ದರು.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಇದೀಗ ಚುನಾವಣೆ ಆಯೋಗಕ್ಕೆ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.