ಚಿತ್ರದುರ್ಗ : ಲೋಕಸಭೆ ಚುನಾವಣೆಗೆ ಈಗಾಗಲೇ ಹಲವು ನಾಯಕರಿಗೆ ಬಿಜೆಪಿ ಟಿಕೆಟ್ ಕಟ್ ಮಾಡಿದ್ದು ಇದೀಗ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಶಾಸಕ ಎಂ ಚಂದ್ರಪ್ಪ ಅವರ ಪುತ್ರ ರಘು ಚಂದ್ರನ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ ಗೋವಿಂದ ಕಾರಜೋಳ್ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಇದೀಗ ರಘು ಚಂದ್ರನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರ ತಂದೆ ಶಾಸಕ ಎಂ ಚಂದ್ರಪ್ಪ ತಿಳಿಸಿದರು.
ಈಶ್ವರಪ್ಪಗೆ ‘ಹೈಕಮಾಂಡ್’ ಮೇಲೆ ಸಿಟ್ಟಿದೆ ಅದನ್ನ ನೇರವಾಗಿ ಹೇಳಲಾಗುತ್ತಿಲ್ಲ : ಬಿವೈ ರಾಘವೇಂದ್ರ ಟಾಂಗ್
ಚಿತ್ರದುರ್ಗದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರು, ಬಿಜೆಪಿ ಟಿಕೆಟ್ ಬದಲಿಸಿದರೆ ಪುತ್ರ ರಘು ಚಂದನ್ ಪಕ್ಷೇತರ ಸ್ಪರ್ಧೆಸುತ್ತಾರೆ ಎಂದು ಚಿತ್ರದುರ್ಗದಲ್ಲಿ ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ಹೇಳಿಕೆ ನೀಡಿದರು.
ಏಪ್ರಿಲ್ 3 ರಂದು ರಘು ಚಂದನ್ ರಾಮಪತ್ರ ಸಲ್ಲಿಕೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಚಿತ್ರದುರ್ಗದಲ್ಲಿರುವ ಬೆಂಬಲಿಗರು ನನ್ನ ನಿರ್ಧಾರಕ್ಕೆ ಬದ್ಧ ಅಂತ ಹೇಳಿದ್ದಾರೆ.ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ.ಇನ್ನೂ ಕಾಲ ಮಿಂಚಿಲ್ಲ ಆದರೆ ಬಿಜೆಪಿ ಟಿಕೆಟ್ ಕೇಳುತ್ತಿದ್ದೇವೆ ಎಂದು ತಿಳಿಸಿದರು.
“ಕೇಜ್ರಿವಾಲ್ ಸಮಯ ಸೀಮಿತವಾಗಿದೆ, ಮೇಡಂ ಹುದ್ದೆಗೆ ತಯಾರಿ ನಡೆಸುತ್ತಿದ್ದಾರೆ”: ಕೇಂದ್ರ ಸಚಿವರ ವಾಗ್ದಾಳಿ
ಆದರೆ ಬಿಜೆಪಿ ಹೈಕಮಾಂಡ್ ಕೊಡುತ್ತಾರ ಬಿಡುತ್ತೋರೋ ಮುಂದಿನ ಮಾತು.ನಮ್ಮ ನೋವು ಪಕ್ಷದ ವರಿಷ್ಠರಿಗೆ ಅರ್ಥ ಆಗಿದೆ ಎಂದು ಭಾವಿಸಿದ್ದೇವೆ. ಈ ಹಿಂದೆ ಪುತ್ರನಿಗೆ ನಿಲ್ಲಿಸುವಂತೆ ಗೋವಿಂದ ಕಾರಜೋಳ್ ಹೇಳಿದ್ದರು.ಈಗ ಗೋವಿಂದ ಕಾರಜೋಳ ಬಂದಿರುವುದು ಸರಿಯೇ ಎಂದು ಕೇಳಿದ್ದೇನೆ.ಪಕ್ಷ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ ಎಲ್ಲದಕ್ಕೂ ಸಿದ್ಧವಿದ್ದೇನೆ ಎಂದು ಚಿತ್ರದುರ್ಗದಲ್ಲಿ ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ ಚಂದ್ರಪ್ಪ ಹೇಳಿಕೆ ನೀಡಿದರು.