ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ ಸಿಗಲಿಲ್ಲವೆಂದು ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ ಇದೀಗ ಅವರ ಹೇಳಿಕೆಗೆ ಸಂಸದ ಬಿ ವೈ ರಾಘವೇಂದ್ರ ಅವರು ಟಾಂಗ್ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಮಾತನಾಡಿದ ಬಿ ವೈ ರಾಘವೇಂದ್ರ ಅವರು, ಕೆಎಸ್ ಈಶ್ವರಪ್ಪಗೆ ಸಿಟ್ಟು ಇರುವುದು ಹೈಕಮಾಂಡ್ ಮೇಲೆ ಅದನ್ನು ನೇರವಾಗಿ ಹೇಳಲು ಕೆಎಸ್ ಈಶ್ವರಪ್ಪ ಅವರಿಗೆ ಆಗುತ್ತಿಲ್ಲ ಎಂದು ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಸಂಸದ ಬಿ ಇ ರಾಘವೇಂದ್ರ ಹೇಳಿಕೆ ನೀಡಿದರು.
ಬಿಎಸ್ ಯಡಿಯೂರಪ್ಪ ಹೈಕಮಾಂಡ್ ಗೆ ಬುದ್ಧಿ ಕಲಿಸುತ್ತೇನೆ ಎಂದು ಹೇಳಿದ್ದಾರೆ.ಹಿಂದುತ್ವವನ್ನು ಯಡಿಯೂರಪ್ಪ ಜಾಹೀರಾತಿಗೆ ಬಳಕೆ ಮಾಡಿಲ್ಲ. ಹಿಂದುತ್ವ ನಮ್ಮ ರಕ್ತ ಹಾಗೂ ಜೀವನದ ಹೆಜ್ಜೆ ಹೆಜ್ಜೆಯಲ್ಲಿದೆ. ಸೊರಬದಲ್ಲಿ ಈಶ್ವರಪ್ಪಗೆ ಸಂಸದ ಬೀ ವೈ ರಾಘವೇಂದ್ರ ಟಾಂಗ್ ನೀಡಿದರು.