ಬೆಂಗಳೂರು: ಎಸ್ ಎಸ್ ಎಲ್ ಪರೀಕ್ಷೆಯ ವೇಳೆಯಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿದಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರಿನ ರಾಗಿಗುಡ್ಡದ ಬಳಿಯಲ್ಲಿ ನಿನ್ನೆ ನಡೆದಿರುವಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯ ವೇಳೆಯಲ್ಲಿ ರಾಗಿಗುಡ್ಡ ಹಾಗೂ ಸಾರಕ್ಕಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ.
ಪರೀಕ್ಷೆ ಮುಗಿಸಿಕೊಂಡು ಹೋಗುವಂತ ಸಂದರ್ಭದಲ್ಲಿ ಗಲಾಟೆ ಮತ್ತೆ ತಾರಕ್ಕೇರಿದೆ. ರಾಗಿಗುಡ್ಡದ ವಿದ್ಯಾರ್ಥಿಗಳು ಹಾಗೂ ಸಾರಕ್ಕಿಯ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದು, ರಾಗಿಗುಡ್ಡದ ಮೂವರು ವಿದ್ಯಾರ್ಥಿಗಳಿಗೆ ಸಾರಕ್ಕಿಯ ವಿದ್ಯಾರ್ಥಿಗಳು ಚಾಕುವಿನಿಂದ ಇರಿದಿರೋದಾಗಿ ತಿಳಿದು ಬಂದಿದೆ.
ಚಾಕು ಇರಿತಕ್ಕೆ ಒಳಗಾಗಿರುವಂತ ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ‘ಏರ್ ಪ್ಲೇಜರ್’ ಪೈಪ್ ನಿಂದ ಹುಚ್ಚಾಟ : ‘ಗುದದ್ವಾರಕ್ಕೆ’ ಗಾಳಿ ತುಂಬಿ, ಸ್ನೇಹಿತನ ಕೊಂದ ಗೆಳೆಯರು
JEE Main 2024 : ‘ಜೆಇಇ ಮೇನ್ ಏಪ್ರಿಲ್ ಸೆಷನ್ ಪರೀಕ್ಷೆ’ ದಿನಾಂಕ ಪರಿಷ್ಕರಣೆ ; ವಿವರ ಇಲ್ಲಿದೆ