ಬೆಂಗಳೂರು: ಕರ್ನಾಟಕವು ಅತ್ಯಂತ ದುರ್ದೈವದ ಪರಿಸ್ಥಿತಿಯಲ್ಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಅವರು ಕಳವಳ ವ್ಯಕ್ತಪಡಿಸಿದರು.
ಹೋಟೆಲ್ “ಜಿ.ಎಂ. ರಿಜಾಯ್ಸ್” ನ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಭಯೋತ್ಪಾದನೆಯ ಚಟುವಟಿಕೆಗಳು ನಡೆಯುತ್ತಿದ್ದರೂ ಏನೂ ಆಗಿಲ್ಲವೇನೋ ಎಂಬ ಸ್ಥಿತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಇದೆ ಎಂದು ಅವರು ಟೀಕಿಸಿದರು.
ಇತ್ತೀಚೆಗೆ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಮತ್ತು ಆ ಸ್ಫೋಟದ ಕುರಿತು ಎನ್ಐಎ ತನಿಖೆ ನಡೆಯುತ್ತಿದೆ. ಮೊದಲಿಗೆ ಪೊಲೀಸ್ ತನಿಖೆ ನಡೆಯುತ್ತಿತ್ತು. ಇದೀಗ ಸಿಸಿಬಿ ಮತ್ತು ಎನ್ಐಎ ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು.
ಎನ್ಐಎ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ನಿನ್ನೆ ದಾಳಿ ನಡೆಸಿದೆ. ಶಿವಮೊಗ್ಗದವರಾದ ಇಬ್ಬರು ಪ್ರಮುಖ ಆರೋಪಿಗಳ ಕುರಿತು ಮಾಹಿತಿ ಲಭಿಸಿದೆ. ಇಲ್ಲಿನ ಸ್ಫೋಟಕ್ಕೂ ಮಂಗಳೂರಿನ ಸ್ಫೋಟಕ್ಕೂ ಸಂಬಂಧ ಇದೆ ಎಂದು ತಿಳಿಸಿದರೂ, ಮುಖ್ಯಮಂತ್ರಿಯವರು ಅದನ್ನು ಅಲ್ಲಗಳೆದಿದ್ದಾರೆ. ಸ್ಫೋಟದ ದಿನ ಸರಕಾರದ ಎಲ್ಲ ಪ್ರತಿನಿಧಿಗಳು ಇದು ಭಯೋತ್ಪಾದಕ ಚಟುವಟಿಕೆ ಅಲ್ಲ; ಎರಡು ಉದ್ಯಮಗಳ ನಡುವಿನ ನಡುವಿನ ವ್ಯಾಜ್ಯ ಎಂದು ಬಿಂಬಿಸಿದ್ದರು. ಭಯೋತ್ಪಾದನೆ ನಿಗ್ರಹಕ್ಕೆ ಪ್ರಯತ್ನ ಮಾಡದೆ ಸರಕಾರವು ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಆಕ್ಷೇಪಿಸಿದರು.
ತರಬೇತಿ ಪಡೆದದವರೇ ರಾಮೇಶ್ವರಂ ಕೆಫೆ ಸ್ಫೋಟ ಮಾಡಿದ್ದಾರೆ. ಇದಕ್ಕೆ ಪೂರ್ವ ತಯಾರಿ ಮಾಡಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದ್ದ ಸರಕಾರವು ತುಷ್ಟೀಕರಣದ ರಾಜಕಾರಣ ಮಾಡುತ್ತಿರುವಂತಿದೆ ಎಂದು ಆರೋಪಿಸಿದರು. ವಿಧಾನಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಹೆಗ್ಗಳಿಕೆಗೆ ಕಾಂಗ್ರೆಸ್ ಸರಕಾರ ಕಾರಣ ಎಂದು ವ್ಯಂಗ್ಯವಾಗಿ ನುಡಿದರು.
ರಾಜ್ಯ ವಿಧಾನಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ಆಶಾ ರಾವ್, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ರೇಖಾ ಗೋವಿಂದ ಮತ್ತು ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀಮತಿ ಹೇಮಲತಾ ಶೇಟ್ ಅವರು ಉಪಸ್ಥಿತರಿದ್ದರು.
ಬೆಂಗಳೂರು : ‘ಏರ್ ಪ್ಲೇಜರ್’ ಪೈಪ್ ನಿಂದ ಹುಚ್ಚಾಟ : ‘ಗುದದ್ವಾರಕ್ಕೆ’ ಗಾಳಿ ತುಂಬಿ, ಸ್ನೇಹಿತನ ಕೊಂದ ಗೆಳೆಯರು
JEE Main 2024 : ‘ಜೆಇಇ ಮೇನ್ ಏಪ್ರಿಲ್ ಸೆಷನ್ ಪರೀಕ್ಷೆ’ ದಿನಾಂಕ ಪರಿಷ್ಕರಣೆ ; ವಿವರ ಇಲ್ಲಿದೆ