ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರು ಅಂಚೆ ಮತದಾನ ಮಾಡುವ ಸಲುವಾಗಿ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿಗೆ ಬಿಬಿಎಂಪಿ ನಿಯೋಜಿಸಿದೆ. ಅಲ್ಲದೇ 85 ವರ್ಷ ಮೇಲ್ಪಟ್ಟವರು ಅಂಚೆ ಮತದಾನಕ್ಕಾಗಿ ಹೇಗೆ ನೋಂದಾಯಿಸಿಕೊಳ್ಳಬೇಕು ಎನ್ನುವ ಬಗ್ಗೆ ಮಹತ್ವದ ಮಾಹಿತಿ ನೀಡಲಾಗಿದೆ.
ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಅವರ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ 3 ಲೋಕಸಭಾ ಕ್ಷೇತ್ರಗಳಲ್ಲಿ ಬರುವ ಮತದಾರರ ಪಟ್ಟಿಯಲ್ಲಿರುವ 85 ವರ್ಷಕ್ಕಿಂತ ಮೇಲ್ಪಟ್ಟ(AVSC) ಹಾಗೂ ವಿಶೇಷ ಚೇತನರು(ಶೇ.40ಕ್ಕಿಂತ ಹೆಚ್ಚು ಅಂಗವಿಲತೆ ಉಳ್ಳವರು[ಮತದಾರರ ಪಟ್ಟಿಯಲ್ಲಿ ಗುರುತಿಸಿರುವ]-PWD) ಅಂಚೆ ಮತದಾನ ಮೂಲಕ ಅವಕಾಶ ಕಲ್ಪಿಸಲಾಗುತ್ತದೆ.
ಸಾರ್ವತ್ರಿಕಾ ಲೋಕಸಭಾ ಚುನಾವಣೆ-2024ರ ಹಿನ್ನೆಲೆ ನಗರದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರು ಅಂಚೆ ಮತದಾನ ಮಾಡುವ ನಿಟ್ಟನಲ್ಲಿ ಬೂತ್ ಮಟ್ಟದ ಅಧಿಕಾರಿಗಳು ದಿನಾಂಕ: 21-03-2024 ರಿಂದ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರ ಪಟ್ಟಿಯನುಸಾರ ಮನೆ-ಮನೆ ಭೇಟಿ ನೀಡಿ ಪಟ್ಟಿ ಸಂಗ್ರಹಿಸಿ 12ಡಿ ನಮೂನೆಗಳ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ.
85 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೆತನರು ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸುವ ಅವಕಾಶವಿದ್ದು, ಅಂಚೆ ಮತದಾನ ಮಾಡಲು 12ಡಿ ನಮೂನೆ ಮೂಲಕ ದೃಢೀಕರಣ ನೀಡಿದ ನಂತರ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಅವಕಾಶವಿರುವುದಿಲ್ಲ.
ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ: 3/4/2022/SDR/Vol.ll Dated: 04.03.2024 ಪತ್ರದಂತೆ Conduction of Election Rules 1961 Rule 27A Clause(e)ಕ್ಕೆ ಅಗತ್ಯ ತಿದ್ದುಪಡಿ ಮಾಡಿ ಹಿರಿಯ ನಾಗರೀಕರ ವಯಸ್ಸು 80 ರಿಂದ 85ಕ್ಕೆ ಹೆಚ್ಚಿಸಿರುವುದರಿಂದ ಎ.ವಿ.ಎಸ್.ಸಿ ವರ್ಗದಡಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮಾತ್ರ ಅಂಚೆ ಮತಪತ್ರ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
ಮುಂದುವರಿದು, ಚುನಾವಣಾ ಅಧಿಸೂಚನೆಯ ನಂತರ 5 ದಿನಗಳ ಒಳಗಾಗಿ ಭರ್ತಿಮಾಡಿದ ಧೃಡೀಕೃತ 12ಡಿ ನಮೂನೆಯನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗೆ ಸಲ್ಲಿಸಬೇಕಾಗಿರುತ್ತದೆ.
ಚುನಾವಣಾ ವೆಬ್ ಸೈಟ್ ಮೂಲಕ ನೋಂದಣಿಗೆ ಅವಕಾಶ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರ ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ 12ಡಿ ನಮೂನೆ ಪಡೆದು ದೃಢೀಕರೀಸಲು ಸಾಧ್ಯವಾಗದಿದ್ದಲ್ಲಿ ಭಾರತ ಚುನಾವಣಾ ಆಯೋಗದ ವೆಬ್ಸೈಟ್ https://www.eci.gov.in/ಗೆ ಭೇಟಿ ನೀಡಿದರೆ 12ಡಿ ನಮೂನೆಗಳು ಲಭ್ಯವಿದ್ದು, ಸದರಿ ನಮೂನೆಗಳನ್ನು ಭರ್ತಿಮಾಡಿ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ 12ಡಿ ನಮೂನೆಗಳನ್ನು ನೇರವಾಗಿ ಸಲ್ಲಿಸುವ ಅವಕಾಶವೂ ಇರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷರ್ ಗಿರಿ ನಾಥ್ ರವರು ಸಾರ್ವಜನಿಕ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
ನಾನು ‘ಅಂಗನವಾಡಿ ಕಾರ್ಯಕರ್ತೆ’ಯರ ಸಭೆ ನಡೆಸಿಲ್ಲ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ
ಸಾರ್ವಜನಿಕರೇ ಎಚ್ಚರ.! ‘ನೀತಿ ಸಂಹಿತೆ’ ವೇಳೆ ಈ ಎಲ್ಲವೂ ನಿಷೇಧ, ಉಲ್ಲಂಘಿಸಿದ್ರೆ ‘ಕೇಸ್ ಫಿಕ್ಸ್’