Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

06/07/2025 7:41 PM

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರೋದು ಡೌಟ್- ಸಿ.ಟಿ.ರವಿ
KARNATAKA

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರೋದು ಡೌಟ್- ಸಿ.ಟಿ.ರವಿ

By kannadanewsnow0920/03/2024 2:46 PM

ಬೆಂಗಳೂರು: ನಾನೇ ಸ್ಟ್ರಾಂಗ್ ಎನ್ನುವ ಸಿದ್ದರಾಮಯ್ಯನವರೇ ನಿಮ್ಮ ಪರಿಸ್ಥಿತಿ ಏನಿದೆ; 5 ವರ್ಷ ಸಿಎಂ ಆಗಿರುವ ಖಾತರಿಯೇ ನಿಮಗಿಲ್ಲ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇ 5 ವರ್ಷ ಸಿಎಂ, ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಎಂದು ಹೇಳಿಸಿಕೊಳ್ಳುವ ಸ್ಥಿತಿ ಅವರದು. ದುರ್ಬಲ ಆಡಳಿತ ಸಿದ್ದರಾಮಯ್ಯರದು. ಕಳೆದೊಂದು ವರ್ಷವನ್ನು ಗಮನಿಸಿದರೆ ಆಡಳಿತದ ಹಿಡಿತವೇ ಅವರಿಗೆ ಸಿಕ್ಕಿಲ್ಲ ಎಂದು ಅರಿವಾಗುತ್ತದೆ ಟೀಕಿಸಿದರು. ನೀವೇ ನೇಮಕ ಮಾಡಿಕೊಂಡ ರಾಜಕೀಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಸಲಹೆಗಾರರು ‘ಅಭಿವೃದ್ಧಿಗೆ ಬಿಡಿಗಾಸೂ ಕೊಡುತ್ತಿಲ್ಲ’ ಎಂದು ನಿಮ್ಮ ಗುಣಗಾನ ಮಾಡಿದ್ದಾರೆ ಎಂದು ವ್ಯಂಗ್ಯವಾಗಿ ತಿಳಿಸಿದರು.

ಹಿರಿಯ ಸಚಿವರು ಮತ್ತು ಶಾಸಕರೇ ನಿಮ್ಮ ಸ್ಟ್ರಾಂಗ್ ಆಡಳಿತಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಿಮ್ಮ ಸರಕಾರದ ನೀತಿಯ ಪರಿಣಾಮವಾಗಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳಾ ದೌರ್ಜನ್ಯ ಮಾತ್ರವಲ್ಲ ಬೆತ್ತಲೆ ಮೆರವಣಿಗೆ ನಡೆಯುತ್ತಿದೆ. ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಆಗುತ್ತದೆ. ಹನುಮಾನ್ ಚಾಲೀಸ ಹಾಕುವುದು ಕೂಡ ಗಲಭೆಗೆ ಕಾರಣವಾಗುವಷ್ಟು ಆಡಳಿತ ಹದಗೆಟ್ಟಿದೆ ಎಂದು ಟೀಕಿಸಿದರು.

ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಇನ್ನೇನು ಸಾಕ್ಷಿ ಬೇಕು ಎಂದು ಅವರು ಪ್ರಶ್ನಿಸಿದರು. ಮುಖ್ಯಮಂತ್ರಿಗಳ ಜೊತೆಗೆ ಶ್ಯಾಡೋ ಮುಖ್ಯಮಂತ್ರಿ, ಸೂಪರ್ ಸಿಎಂ- ಇವರೆಲ್ಲರೂ ಸಕ್ರಿಯರಾಗಿದ್ದಾರೆ. ಮುಖ್ಯಮಂತ್ರಿ ದುರ್ಬಲವಾಗಿದ್ದಾರೆ ಎಂದೇ ಇದರ ಅರ್ಥ ಎಂದು ಅವರು ವಿಶ್ಲೇಷಣೆ ಮಾಡಿದರು.

ಮೋದಿಯವರಿಗೆ ದೇಶ- ವಿದೇಶಗಳ ಮನ್ನಣೆ..

ಮುಖ್ಯಮಂತ್ರಿಗಳು ತಮ್ಮ ಟ್ವೀಟ್‍ನಲ್ಲಿ ‘ನಾನೇ ಸ್ಟ್ರಾಂಗ್ ಸಿಎಂ; ವೀಕ್ ಪಿಎಂ’ ಎಂದಿದ್ದಾರೆ. ಯಾರು ತನ್ನನ್ನು ತಾನು ಸ್ಟ್ರಾಂಗ್ ಎನ್ನುವವರು ವೀಕ್ ಆಗಿರುತ್ತಾರೆ. ಮೋದಿಜೀ ಅವರು ಬಲಿಷ್ಠ ನಾಯಕ ಎಂದು ಕೇವಲ ನಮ್ಮ ಪಕ್ಷ, ನಮ್ಮ ನಾಯಕರು ಮತ್ತು ಕಾರ್ಯಕರ್ತರು ಹೇಳುತ್ತಿಲ್ಲ. ದೇಶದ ಜನತೆ ಮಾತ್ರವಲ್ಲದೆ ವಿಶ್ವದ ಅಗ್ರಗಣ್ಯ ನಾಯಕರು ಮೋದಿಯವರನ್ನು ಅತ್ಯಂತ ಬಲಿಷ್ಠ ನಾಯಕರು ಎನ್ನುತ್ತಾರೆ ಎಂದು ಸಿ.ಟಿ.ರವಿ ಅವರು ವಿಶ್ಲೇಷಿಸಿದರು.

ಅಮೆರಿಕದ ಅಧ್ಯಕ್ಷರು ಮೋದಿಯವರು ವಿಶ್ವದ ಪ್ರಖ್ಯಾತ ನಾಯಕ ಎನ್ನುತ್ತಾರೆ. ಇಸ್ರೇಲ್ ಪ್ರಧಾನಿ ಕೂಡ ಮೋದಿಜೀ ಅವರನ್ನು ಅತ್ಯಂತ ಜನಪ್ರಿಯ ನಾಯಕ ಎಂದಿದ್ದಾರೆ. ಜಗತ್ತಿನ 11 ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಮೋದಿಯವರಿಗೆ ನೀಡಿವೆ ಎಂದು ಅವರು ವಿವರಿಸಿದರು. ಅತಿ ಹೆಚ್ಚು ವಿದೇಶದ ನಾಗರಿಕ ಪ್ರಶಸ್ತಿಯನ್ನು ಮೋದಿಯವರು ಪಡೆದುಕೊಂಡಿದ್ದಾರೆ ಎಂದರು.

ಉಕ್ರೇನ್- ರಷ್ಯಾ ಯುದ್ಧದ ಸಮಯದಲ್ಲಿ ಪ್ರಧಾನಿ ಮೋದಿಯವರ ಮಧ್ಯಪ್ರವೇಶದಿಂದ ಪರಮಾಣು ಬಾಂಬ್ ಪ್ರಯೋಗ ತಪ್ಪಿದೆ ಎಂದು ಅಮೇರಿಕವೇ ಹೇಳಿದೆ. ಕತಾರ್‍ನಲ್ಲಿ ಮರಣದಂಡನೆಗೆ ಗುರಿ ಆಗಿದ್ದಂಥ ನೌಕಾಸೇನೆಯ ನಿವೃತ್ತ ಅಧಿಕಾರಿಗಳನ್ನು ಮರಣದಂಡನೆಯಿಂದ ಬಿಡಿಸಿ ಈಚೆಗೆ ಸುರಕ್ಷಿತವಾಗಿ ಕರೆದುಕೊಂಡು ಬಂದವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದು ತಿಳಿಸಿದರು. ಉಕ್ರೇನ್- ರಷ್ಯಾ ಯುದ್ಧದ ಸಂದರ್ಭದಲ್ಲಿ 48 ಗಂಟೆಗಳ ಕಾಲ ಯುದ್ಧ ನಿಲುಗಡೆ ಮಾಡಿ, 23 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ಸಿರಿಯ, ಇಸ್ರೇಲ್, ಸುಡಾನ್, ಅಫಘಾನಿಸ್ತಾನ ಇತ್ಯಾದಿ ಬೇರೆಬೇರೆ ರಾಷ್ಟ್ರಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. 2014ಕ್ಕೆ ಮುಂಚೆ ಗ್ಲೋಬಲ್ ರೇಟಿಂಗ್ ಕಂಪನಿಗಳು ಭಾರತವನ್ನು ವಿಶ್ವದ ದುರ್ಬಲ ಆರ್ಥಿಕತೆ ಇರುವ 5 ರಾಷ್ಟ್ರಗಳಲ್ಲಿ ಒಂದು ಎಂದು ರೇಟಿಂಗ್ ನೀಡಿದ್ದವು. ದುರ್ಬಲ ಆರ್ಥಿಕತೆಯಿಂದ ಬಲಿಷ್ಠ ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೆ ಭಾರತ ಏರಿದೆ ಎಂದು ಹೇಳಿದರು. ಒಂದೆರಡು ವರ್ಷಗಳಲ್ಲಿ ನಾವು 3ನೇ ಸ್ಥಾನಕ್ಕೆ ದಾಪುಗಾಲಿಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2014ರಲ್ಲಿ 322 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಇದ್ದರೆ, ಇವತ್ತು 636 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಇದೆ. ರಫ್ತಿನಲ್ಲಿ ನಾವು ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದಿದ್ದೇವೆ. 776 ಬಿಲಿಯನ್ ಡಾಲರ್ ಮೌಲ್ಯದ ಸ್ವತ್ತುಗಳನ್ನು ಭಾರತ ರಫ್ತು ಮಾಡಿದೆ. ಒಂದು ಕಾಲದಲ್ಲಿ ಶೇ 98 ಮೊಬೈಲ್‍ಗಳ ಆಮದಾಗುತ್ತಿದ್ದರೆ, ಸ್ಟ್ರಾಂಗ್ ಪಿಎಂನ ಮೇಕ್ ಇನ್ ಇಂಡಿಯ ಕರೆಯ ಮೂಲಕ ಇವತ್ತು ಶೇ 98 ಮೊಬೈಲ್‍ಗಳು ಭಾರತದಲ್ಲೇ ತಯಾರಾಗುತ್ತಿವೆ ಎಂದು ಅಂಕಿಅಂಶಗಳನ್ನು ನೀಡಿದರು.

ಕೋವಿಡ್ ಸಂಬಂಧ 2 ವ್ಯಾಕ್ಸಿನ್ ಗಳನ್ನು ಭಾರತದಲ್ಲೇ ತಯಾರಿಸಿ 140 ಕೋಟಿ ಜನರಿಗೆ ಉಚಿತವಾಗಿ ವಿತರಣೆ ಮಾಡಿ, 100ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಮೈತ್ರಿಯ ಮೂಲಕ ರಫ್ತು ಮಾಡಿದವರು. ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿ. ಭಯೋತ್ಪಾದನೆಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟಿದ್ದೇವೆ ಎಂದು ತಿಳಿಸಿದರು. ಭಾರತವೂ ಸುರಕ್ಷಿತ- ಭಾರತೀಯರೂ ಸುರಕ್ಷಿತವಾಗಿದ್ದಾರೆ. ಭಾರತದ ಆರ್ಥಿಕತೆಯೂ ವೇಗಗತಿಯಲ್ಲಿ ಬೆಳೆಯುತ್ತಿದೆ. ಬಡವರಿಗೆ ಬಲ ತುಂಬುತ್ತಿದ್ದಾರೆ. ಹೀಗೆ ಮೋದಿಯವರ ಸಾಧನೆಯನ್ನು ಗುಣಗಾನ ಮಾಡಲು ಇಂಥ ನೂರಾರು ಉದಾಹರಣೆಗಳನ್ನು ತೆಗೆದುಕೊಳ್ಳಬಹುದು ಎಂದು ವಿಶ್ಲೇóಷಿಸಿದರು.

ಮೋದಿ ಅವರು ಸ್ಟ್ರಾಂಗ್ ಎಂದು ದೇಶದ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ; ವಿದೇಶದವರೂ ಮೋದಿ ಈಸ್ ದಿ ಸ್ಟ್ರಾಂಗೆಸ್ಟ್ ಮ್ಯಾನ್ ಎಂದು ಒಪ್ಪಿಕೊಂಡಿದ್ದಾರೆ. ಎಂದು ಪ್ರಶ್ನಿಸಿದರು. ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಬಿಜೆಪಿ ವಕ್ತಾರರಾದ ಪ್ರಕಾಶ್, ಮೋಹನ್ ವಿಶ್ವ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಕೆ.ಎಸ್ ಈಶ್ವರಪ್ಪ ನಂತರ ಮತ್ತೊಬ್ಬ ಬಿಜೆಪಿ ನಾಯಕ ‘ಬಂಡಾಯ’ : ‘ಪಕ್ಷೇತರ’ ಅಭ್ಯರ್ಥಿಯಾಗಿ ಸಂಗಣ್ಣ ಕರಡಿ ಸ್ಪರ್ಧೆ

`EVM’ ಪ್ರಜಾಪ್ರಭುತ್ವ ಪ್ರಕ್ರಿಯೆಯ ಪಾರದರ್ಶಕತೆಗೆ ಸಾಕ್ಷಿಯಾಗಿದೆ : ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರೋದು ಡೌಟ್- ಸಿ.ಟಿ.ರವಿ Siddaramaiah has been CM for 5 years: CT Ravi
Share. Facebook Twitter LinkedIn WhatsApp Email

Related Posts

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

06/07/2025 7:41 PM2 Mins Read

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM1 Min Read

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM1 Min Read
Recent News

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

06/07/2025 7:41 PM

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM
State News
KARNATAKA

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

By kannadanewsnow0506/07/2025 7:41 PM KARNATAKA 2 Mins Read

ಧಾರವಾಡ : ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಸಹೋದರನಿಗೆ ಬಹಳಷ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಅವರ ಬೆರಳಿಂದ ಉಗುರು…

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.