ಮುಂಬೈ: ಛೋಟಾ ರಾಜನ್ ಗ್ಯಾಂಗ್ ಸದಸ್ಯ ಎಂದು ಹೇಳಲಾದ ರಾಮ್ನಾರಾಯಣ್ ಗುಪ್ತಾ ಅಲಿಯಾಸ್ ಲಖನ್ ಭೈಯಾ ಅವರನ್ನು 18 ವರ್ಷಗಳ ಹಿಂದೆ ನಕಲಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರನ್ನು ದೋಷಿ ಎಂದು ಬ್ಯಾಲಿಸ್ಟಿಕ್ ತಜ್ಞರ ಬಲವಾದ ಪುರಾವೆಗಳನ್ನು ಉಲ್ಲೇಖಿಸಿ ಬಾಂಬೆ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಶರ್ಮಾಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್, ಮೂರು ವಾರಗಳಲ್ಲಿ ಶರಣಾಗುವಂತೆ ನಿರ್ದೇಶಿಸಿತು.
ಮಹಾರಾಷ್ಟ್ರದಲ್ಲಿ ನಡೆದ ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಶಿಕ್ಷೆಯಾಗಿರುವುದು ಇದೇ ಮೊದಲು.
“ಪ್ರಾಸಿಕ್ಯೂಷನ್ ತನ್ನದೇ ಆದ ಶಕ್ತಿ ಮತ್ತು ಅರ್ಹತೆಯ ಮೇಲೆ ರಾಮ್ನಾರಾಯಣ್ ಅವರನ್ನು ಪೊಲೀಸರು ಕೊಂದಿದ್ದಾರೆ ಎಂದು ಸಾಬೀತುಪಡಿಸಿದೆ.ನಕಲಿ ಎನ್ಕೌಂಟರ್ಗೆ ನಿಜವಾದ ಎನ್ಕೌಂಟರ್ನ ಬಣ್ಣವನ್ನು ನೀಡಲಾಗಿದೆ ಎಂಬುದು ಸ್ಪಷ್ಟವಾಗಿದೆ” ಎಂದು ನ್ಯಾಯಾಲಯ ಹೇಳಿದೆ.