ಬೆಂಗಳೂರು: ನಗರದ ನಗರತ್ ಪೇಟೆಯಲ್ಲಿ ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಯುವಕರು ಮೊಬೈಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿನ ಗೂಂಡಾಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಿ ಅಂತ ನಟ ಪ್ರಕಾಶ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ನಗರತ್ ಪೇಟೆಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದಂತ ಪ್ರಕರಣವನ್ನು ಖಂಡಿಸಿ, ನಗರತ್ ಪೇಟೆಯಲ್ಲಿ ಕೇಸರಿ ಪಡೆ ಗರ್ಜಿಸಿದೆ. ಯುವಕನ ಮೇಲೆ ನಡೆದಂತ ಹಲ್ಲೆ ಖಂಡಿಸಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಶಾಂತಿ ಮೆರವಣಿಗೆಯನ್ನು ನಡೆಸಿದರು.
ಮತ್ತೊಂದೆಡೆ ಈ ಘಟನೆ ಬಗ್ಗೆ ನಟ ಪ್ರಕಾಶ್ ರಾಜ್ ಎಕ್ಸ್ ಮಾಡಿದ್ದು, ಈ ಗೂಂಡಾಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಯಾವುದೇ ಧರ್ಮದ ಯಾವುದೇ ವ್ಯಕ್ತಿಯಿಂದ ಇಂತಹ ಗೂಂಡಾಗಿರಿ ಕೃತ್ಯಗಳು ನಡೆದರೂ ಅದನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಹೇಳಿದ್ದಾರೆ. ಈ ಮೂಲಕ #justasking ಹ್ಯಾಷ್‌ಟ್ಯಾಗ್ ಎಂಬುದಾಗಿ ತಿಳಿಸಿದ್ದಾರೆ.
These goons should be arrested and punished… such acts of hooliganism from any one from any religion should not be tolerated at any cost.#justasking https://t.co/c6Ro1SDb1N
— Prakash Raj (@prakashraaj) March 18, 2024
ಇನ್ನೂ ನಟ ಪ್ರಕಾಶ್ ರೈ ಅವರ ಎಕ್ಸ್ ಪೋಸ್ಟ್ ಗೆ ಕೆಲವರು ಬಿಜೆಪಿ ಪರ ಬ್ಯಾಟ್ ಬೀಸುತ್ತಿದ್ದ ಅವರು, ಇದೇನು ಹೀಗೆ ಪೋಸ್ಟ್ ಮಾಡಿದ್ದಾರಲ್ಲ ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದು ನಿಜವಾಗಿಯೂ ನಟ ಪ್ರಕಾರ್ ರೈ ಮಾಡಿರೋ ಪೋಸ್ಟಾ ಅಂತ ಪ್ರಶ್ನಸಿದ್ದಾರೆ. ಕೆಲವರಂತೂ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಅನಿಸುತ್ತಿದೆ ಅಂತ ಪ್ರತಿಕ್ರಿಯಿಸಿದ್ದಾರೆ.
BREAKING: ಚಿತ್ರದುರ್ಗದಲ್ಲಿ ‘ಹೃದಯ ವಿದ್ರಾವಕ’ ಘಟನೆ: ಇಬ್ಬರು ಮಕ್ಕಳನ್ನು ಬೆಂಕಿಗೆ ತಳ್ಳಿ, ತಾಯಿ ಹಾರಿ ‘ಸಜೀವ ದಹನ’
ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರೆಯಲಿದೆ: ಬಿವೈ ವಿಜಯೇಂದ್ರ