ಶಿವಮೊಗ್ಗ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ನರೇಂದ್ರ ಮೋದಿಯವರು ಶಿವಮೊಗ್ಗ ನಗರದಲ್ಲಿ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ಉತ್ತರ ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿ ಕರ್ನಾಟಕ ಕಾಂಗ್ರೆಸ್ ನಲ್ಲಿ ಸೂಪರ್ ಸಿಎಂ ಹಾಗೂ ಶಾಡೋ ಸಿಎಂ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
‘ಈ ಬಾರಿ 400 ಮೇಲೆ’ : ಶಿವಮೊಗ್ಗದಲ್ಲಿ ಲೋಕ ಸಮರಕ್ಕೆ ‘ಕಹಳೆ’ ಊದಿದ ಪ್ರಧಾನಿ ನರೇಂದ್ರ ಮೋದಿ
ರಾಜ್ಯ ಕಾಂಗ್ರೆಸ್ ನಲ್ಲಿ ಸೂಪರ್ ಸಿಎಂ ಶಾಡೋ ಸಿಎಂ ಇದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ ಡಿಕೆ ಶಿವಕುಮಾರ್ ವಿರುದ್ಧ ಮೋದಿ ಕಿಡಿ ಕಾರಿದರು ನಿನ್ನೆ ಮುಂಬೈನಲ್ಲಿ ಕಾಂಗ್ರೆಸ್ ಸಭೆಯಲ್ಲಿ ಒಂದು ನಿರ್ಣಯ ಮಾಡಿದ್ದಾರೆ ಎಂದರು.
‘ಈ ಬಾರಿ 400 ಮೇಲೆ’ : ಶಿವಮೊಗ್ಗದಲ್ಲಿ ಲೋಕ ಸಮರಕ್ಕೆ ‘ಕಹಳೆ’ ಊದಿದ ಪ್ರಧಾನಿ ನರೇಂದ್ರ ಮೋದಿ
ಹಿಂದೂ ಸಮಾಜದ ಶಕ್ತಿಯನ್ನು ನಿರ್ಮೂಲನೆ ಮಾಡುವುದಾಗಿ ಹೇಳಿದ್ದಾರೆ ನಮ್ಮ ಶಕ್ತಿಯನ್ನು ನಾವು ಹೆಚ್ಚಿಸುವ ಕೆಲಸವನ್ನು ನಾವು ಮಾಡಬೇಕಿದೆ ಭಾಳಾ ಸಾಹೇಬ ಠಾಕರೆಯವರ ಆತ್ಮಕ್ಕೆ ಎಷ್ಟು ದುಃಖವಾಗಿರಲಿಕ್ಕಿಲ್ಲ ಎಂದು ತಿಳಿಸಿದರು.
ಮೋದಿ ಸರ್ಕಾರ ಕೇವಲ ಚುನಾವಣೆಗಾಗಿ ಕೆಲಸ ಮಾಡುವುದಿಲ್ಲ : ಸಂಕಲ್ಪ ಸಮಾವೇಶದಲ್ಲಿ BSY ಹೇಳಿಕೆ
ದೇಶದ ಮಹಿಳೆಯರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ.ಇದೇ ಸಮಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳನ್ನು ಮೋದಿಯವರು ಉಲ್ಲೇಖಿಸಿದ್ದಾರೆ. ಮಂತ್ರ ಕಣ ತಾಯಿ ಕಣ ದೇವಿ ಕಣ ಅಂತ ಕುವೆಂಪು ಅವರು ಹೇಳಿದ್ದರು. ಈ ಮೂಲಕ ಮಹಿಳೆಯರ ಶಕ್ತಿ ಮತ್ತು ಮಹತ್ವವನ್ನು ಕುವೆಂಪು ಸಾರಿದ್ದರು ಎಂದು ತಿಳಿಸಿದರು.