ಬೆಂಗಳೂರು: ರಾಜ್ಯದಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ( sub-registrar’s office ) ಸಾರ್ವಜನಿಕರಿಗೆ ಮತ್ತಷ್ಟು ಜನಸ್ನೇಹಿ ಸೇವೆ ನೀಡಲು ಏಪ್ರಿಲ್.1ರಿಂದ ಭಾನುವಾರವೂ ಕಾರ್ಯನಿರ್ವಹಿಸುವಂತೆ ಸರ್ಕಾರ ಅಧಿಕೃತ ಆದೇಶ ಮಾಡಿದೆ.
ಈ ಕುರಿತಂತೆ ನೋಂದಣಿ ಮತ್ತು ಮುದ್ರಾಂಕದ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಉತ್ತಮ ಸೇವೆಯನ್ನು ನೀಡುವ ಹಾಗೂ ಆಡಳಿತ ಸುಧಾರಣೆ ಮತ್ತು ಜನಸ್ನೇಹಿ ಆಡಳಿತಕ್ಕಾಗಿ ಪ್ರಾಯೋಗಿಕವಾಗಿ ಮೊದಲನೇ ಹಂತದಲ್ಲಿ ಮಾರ್ಚ್ 2024 ರಿಂದ ಪ್ರಾರಂಭಿಸುತ್ತಾ ಬೆಂಗಳೂರು ನಗರ ಜಿಲ್ಲೆಯ 5 ನೋಂದಣಿ ಜಿಲ್ಲೆಗಳಲ್ಲಿ ಪ್ರತಿ ಒಂದು ನೋಂದಣಿ ಜಿಲ್ಲೆಯಲ್ಲಿ ಒಂದು ಉಪ ನೋಂದಣಿ ಕಛೇರಿಯು ಪಾರದರ್ಶಕ ವಾರದ ಸರದಿಯ ಆಧಾರದ ಮೇಲೆ ಮತ್ತು ಬೆಂಗಳೂರು ಗ್ರಾಮಾಂತರ ನೋಂದಣಿ ಜಿಲ್ಲೆಯ ವ್ಯಾಪ್ತಿಯಲ್ಲಿನ ಉಪ ನೋಂದಣಿ ಕಛೇರಿಗಳ ಪೈಕಿ ಯಾವುದಾದರೂ ಒಂದು ಉಪ ನೋಂದಣಿ ಕಛೇರಿ ಪಾರದರ್ಶಕವಾದ ವಾರದ ಸರದಿಯ ಆಧಾರದ ಮೇಲೆ ಪ್ರತಿ ಭಾನುವಾರ ಕಾರ್ಯನಿರ್ವಹಿಸುವಂತೆ ಹಾಗೂ ಇದಕ್ಕೆ ಬದಲಾಗಿ ಆ ವಾರದ ಮಂಗಳವಾರದ ದಿನದಂದು ಸದರಿ ಕಛೇರಿಯು ಪರಿಹಾರವಾಗಿ ರಜೆಯನ್ನು ನೀಡಲು ಆದೇಶಿಸಿದೆ.
ಇದೇ ರೀತಿ ಪ್ರಾಯೋಗಿಕವಾಗಿ ಏಪ್ರಿಲ್ ಮಾಹೆಯಿಂದ ರಾಜ್ಯದ ಬೆಂಗಳೂರು ನಗರ ನೋಂದಣಿ ಜಿಲ್ಲೆಗಳು ಮತ್ತು ಬೆಂಗಳೂರು ಗ್ರಾಮಾಂತರ ನೋಂದಣಿ ಜಿಲ್ಲೆಯು ಸೇರಿದಂತೆ ರಾಜ್ಯದ ಇತರೆ ಎಲ್ಲಾ ನೋಂದಣಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಉಪ ನೋಂದಣಿ ಕಛೇರಿಗಳಲ್ಲಿ ಒಂದು ಉಪ ನೋಂದಣಿ ಕಛೇರಿಯನ್ನು ಪಾರದರ್ಶಕವಾದ ವಾರದ ಸರದಿಯ ಆಧಾರದ ಮೇಲೆ ಪ್ರತಿ ಭಾನುವಾರ ಕಾರ್ಯನಿರ್ವಹಿಸುವಂತೆ ಹಾಗೂ ಇದಕ್ಕೆ ಬದಲಾಗಿ ಸದರಿ ಕಛೇರಿಗಳಿಗೆ ಆ ವಾರದ ಮಂಗಳವಾರ ದಿನದಂದು ಪರಿಹಾರವಾಗಿ ರಜೆಯನ್ನು ನೀಡಲು ಆದೇಶಿಸಿದೆ.
ನೋಂದಣಿ ಜಿಲ್ಲೆಯ ಉಪ ನೋಂದಣಿ ಕಛೇರಿಗಳ ಪೈಕಿ ಭಾನುವಾರದಂದು ಪಾರದರ್ಶಕ ವಾರದ ಸರದಿಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಉಪ ನೋಂದಣಿ ಕಛೇರಿಯ ವಿವರಗಳನ್ನು ಈ ಕೂಡಲೇ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಸಾರ್ವಜನಿಕರ ಮಾಹಿತಿಗಾಗಿ ಅವರ ಕಛೇರಿಯ ಅಧಿಕೃತ ಜಾಲತಾಣದಲ್ಲಿ ಹಾಗೂ ಕಾವೇರಿ-2 ಜಾಲತಾಣದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವುದು. ಅಲ್ಲದೆ ಭಾನುವಾರದಂದು ಕಾರ್ಯನಿರ್ವಹಿಸುವ ಉಪ ನೋಂದಣಿ ಕಛೇರಿಗಳಲ್ಲಿ ದಸ್ತಾವೇಜುಗಳನ್ನು ನೋಂದಾಯಿಸಿಕೊಳ್ಳಲು ಸಾರ್ವಜನಿಕರು ಅನುಕೂಲಕರ ಸಮಯವನ್ನು ನಿಗದಿಪಡಿಸಿಕೊಳ್ಳಲು ಕಾವೇರಿ-2 ತಂತ್ರಾಂಶದಲ್ಲಿ ಸೂಕ್ತ ಪಾರದರ್ಶಕ ಅವಕಾಶಗಳನ್ನು ಕಲ್ಪಿಸಲು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಅವಶ್ಯಕ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಈ ಜನಸ್ನೇಹಿ ಆಡಳಿತ ಸುಧಾರಣೆಯನ್ನು ಯಾವುದೇ ಗೊಂದಲವಿಲ್ಲದ ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಿಗೆ ಸೂಚಿಸಿದ್ದಾರೆ.
ಕೇಂದ್ರದ ‘ಅನುದಾನ’ ತಾರತಮ್ಯದಿಂದ ರಾಜ್ಯಕ್ಕೆ ‘ಆರ್ಥಿಕ ಸವಾಲು’ಗಳು ಎದುರಾಗಿವೆ : ಕೃಷ್ಣ ಭೈರೇಗೌಡ ಆಕ್ರೋಶ
ಬೆಂಗಳೂರಲ್ಲಿ ‘ಕಿಲ್ಲರ್ BMTC’ಗೆ ಮತ್ತೊಂದು ಬಲಿ: ರಸ್ತೆದಾಟುತ್ತಿದ್ದ ವ್ಯಕ್ತಿಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವು