ವಿಜಯಪುರ : ಇಬ್ಬರು ಪ್ರೇಮಿಗಳು ಪರಸ್ಪರ ಒಪ್ಪಿ ಮನೆಯವರು ಒಪ್ಪದ ಕಾರಣ ಓಡಿ ಹೋಗಿ ಮದುವೆಯಾಗಿದ್ದು, ಇದೀಗ ಯುವತಿಯ ತಾಯಿಯು 50 ಲಕ್ಷ ಕೊಡಿ ಇಲ್ಲ ಯುವಕನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ನಡೆದಿದೆ.
‘ಕಾಮಾಲೆ’ ಬಂದಾಗ ‘ಕಣ್ಣು’ಗಳು ಯಾಕೆ ‘ಹಳದಿ ಬಣ್ಣ’ಕ್ಕೆ ತಿರುಗುತ್ವೆ.? ಕಾಮಾಲೆಗೆ ಕಾರಣವೇನು ಗೊತ್ತಾ.?
ಇಂಡಿ ತಾಲೂಕಿನ ಹಂಜಗಿ ಗ್ರಾಮದ ಅನ್ಯ ಕೋಮಿನ ಯುವಕ ಯಾಸೀನ್ ಜಮಾದಾರ್ ಹಾಗೂ ಎಸ್ಸಿ ಸಮುದಾಯಕ್ಕೆ ಸೇರಿರೋ ಅಶ್ವಿನಿ ಭಂಡಾರಿ ಪರಸ್ಪರ ಇಷ್ಟಪಟ್ಟ್ಟಿದ್ದರು. ಇಬ್ಬರೂ ವಯಸ್ಕರರಾಗಿದ್ದು ಮದುವೆಯಾಗೋ ಕನಸು ಕಂಡಿದ್ದರು. ಇವರ ಪ್ರೇಮದ ಕಹಾನಿ ಇಬ್ಬರೂ ಮನೆಯವರಿಗೆ ಗೊತ್ತಾಗಿತ್ತು. ಈ ಕಾರಣ ಯಾಸೀನ್ ಹಾಗೂ ಆಶ್ವಿನಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ, ಸದ್ಯ ಆಶ್ವಿನಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.
ಯುವತಿಯ ಮನೆಯವರು ಯಾಸೀನ್ ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇಷ್ಟರ ಮದ್ಯೆ ಅದೇ ಗ್ರಾಮದ ರೌಡಿ ಶೀಟರ್ ಆಗಿರೋ ಹುಚ್ಚಪ್ಪ ಕಾಲೇಬಾಗ ನಮ್ಮ ಸಮಾಜದ ಯುವತಿಯನ್ನು ಮದುವೆಯಾಗಿದ್ದೀಯಾ. ಒಂದು ಲಕ್ಷ ಹಣ ಕೊಟ್ಟುಬಿಡು ನಿನ್ನ ಕೊಲೆ ಮಾಡಲ್ಲಾ ಎಂದು ಹೇಳಿದ್ದಾರೆ. ಜೀವ ಭಯದಲ್ಲಿದ್ದ ಯಾಸೀನ್ ಒಂದು ಲಕ್ಷ ರೂಪಾಯಿಯನ್ನು ಹುಚ್ಚಪ್ಪ ಕಾಲೇಭಾಗಗೆ ನೀಡಿದ್ದಾರೆ. ಈ ಹಣವನ್ನು ಹುಚ್ಚಪ್ಪ ಕಾಲೇಬಾಗ್, ಮುತ್ತಪ್ಪ ಹಾಗೂ ಅಶ್ವಿನಿಯ ತಾಯಿ ಹಂಚಿಕೊಂಡಿದ್ದಾರೆ ಎಂದು ಯುವತಿ ಅಶ್ವಿನಿ ಆರೋಪ ಮಾಡಿದ್ದಾಳೆ.
ಈ ಮಧ್ಯೆ, ಯಾಸೀನ್ ನನ್ನು ಬಿಟ್ಟು ಬಾ ಬೇರೆ ಮದುವೆ ಮಾಡುತ್ತೇವೆಂದು ಒತ್ತಾಯ ಮುಂದುವರೆಸಿದ್ದಾಳಂತೆ. 50 ಲ್ಷ ಹಣ ಬೇಕೆಂಬ ಬೇಡಿಕೆಗೆ ಯಾಸೀನ್ ಹಾಗೂ ಆಶ್ವಿನಿ ಚಿಂತಾಕ್ರಾಂತರಾಗಿದ್ದಾರೆ. ನಮ್ಮ ಬಳಿ ಹಣವಿಲ್ಲಾ ಎಂದು ಹೇಳಿದರೂ ಯಾಸೀನ್ ತಂದೆ ತಾಯಿಯವರ ಮೇಲೆ ಹೊರ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿರೋ ಸುಳ್ಳು ಪ್ರಕರಣ ದಾಖಲು ಮಾಡಿ ಹಿಂಸೆ ನೀಡುತ್ತಿದ್ದಾರಂತೆ.
BREAKING : ಲೋಕಸಭಾ ಚುನಾವಣೆ 2024 : ತೆಲಂಗಾಣದಲ್ಲಿ ‘BRS-BSP’ ಮೈತ್ರಿ ಫಿಕ್ಸ್
ಇದರಿಂದ ಭಯಗೊಂಡ ಯಾಸೀನ್ ಹಾಗೂ ಅಶ್ವಿನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ.ಈ ನಿಟ್ಟಿನಲ್ಲಿ ನವ ವಿವಾಹಿತ ಜೋಡಿಗೆ ಜಿಲ್ಲಾ ಅಪರ ಪೊಲೀಸ್ ವರಿಷ್ಟಾಧಿಕಾರಿಗಳು ಕಾನೂನು ನೆರವು ಹಾಗೂ ರಕ್ಷಣೆ ನೀಡೋದಾಗಿ ಭರವಸೆ ನೀಡಿದ್ದಾರೆ. ಇವರಿಗೆ ಹಣದ ಬೇಡಿಕೆ ಇಟ್ಟಿರುವವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳವುದಾಗಿಯೂ ಪ್ರೇಮಿಗಳಿಗೆ ಭರವಸೆಯಿತ್ತಿದ್ದಾರೆ.