ಬೆಂಗಳೂರು : ಯುವಕನೊಬ್ಬ ತನ್ನ ಆನ್ಲೈನ್ ಜೂಜಾಟದ ಗೀಳಿಗೆ ಸ್ನೇಹಿತರೊಂದಿಗೆ ಸೇರಿ ಅಪಹರಣ ನಾಟಕ ಆಡಿ ಚಿಕ್ಕಮ್ಮನಿಗೆ ಹಣದ ಬೇಡಿಕೆ ಇಟ್ಟಿದ್ದ ಎನ್ನಲಾಗುತ್ತಿದ್ದು, ಇದೀಗ ಮಗ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆಯು ಬೆಂಗಳೂರಲ್ಲಿ ನಡೆದಿದ್ದು, ಆನ್‌ಲೈನ್ ಜೂಜಾಟದ ಗೀಳಿಗೆ ಬಿದ್ದ ವ್ಯಕ್ತಿಯೊಬ್ಬ ಹಣಕ್ಕಾಗಿ ಅಪಹರಣದ ನಾಟಕವಾಡಿ ಪೊಲೀಸ್ ಅತಿಥಿಯಾದ ಘಟನೆ ನಡೆದಿದೆ. ಆರೋಪಿಯನ್ನು ಜೀವನ್ (29) ಎಂದು ಗುರುತಿಸಲಾಗಿದೆ.
BREAKING: ನಾಳೆ ಮಧ್ಯಾಹ್ನ 3 ಗಂಟೆಗೆ ‘ಲೋಕಸಭಾ’ ಚುನಾವಣೆ ದಿನಾಂಕ ಘೋಷಣೆ!
ಆರೋಪಿಯು ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ವಾರ್ಡನ್ ಆಗಿದ್ದು, ಆತನ ಚಿಕ್ಕಮ್ಮ ಸಹ ಅದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು.ಜೂಜಾಟದ ಗೀಳಿಗಾಗಿ ಸ್ನೇಹಿತರೊಂದಿಗೆ ಹಣಕಾಸಿನ ವ್ಯವಹಾರ ಹೊಂದಿದ್ದ ಜೀವನ್ ಮಾರ್ಚ್ 11ರಂದು ತನ್ನ ತಲೆಯ ಮೇಲೆ ಟೊಮ್ಯಾಟೋ ಸಾಸ್ ಚೆಲ್ಲಿಕೊಂಡು ತನ್ನ ಚಿಕ್ಕಮ್ಮನಿಗೆ ಫೋಟೋಗಳನ್ನು ಕಳಿಸಿ, ತನ್ನನ್ನು ಹಣಕ್ಕಾಗಿ ಅಪಹರಿಸಿರುವುದಾಗಿ ಹೇಳಿದ್ದ.
Lok Sabha Polls 2024:ಇಂದು ಕೇರಳ, ತಮಿಳುನಾಡು, ತೆಲಂಗಾಣದಲ್ಲಿ ಪ್ರಚಾರ ನಡೆಸಲಿರುವ ಪ್ರಧಾನಿ ಮೋದಿ
ಆನ್ಲೈನ್ ಆ್ಯಪ್ನಲ್ಲಿ ಜೂಜಾಟವಾಡಿ ಹಣ ಕಳೆದುಕೊಂಡಿದ್ದ ಜೀವನ್, ಹಣಕ್ಕಾಗಿ ಗೆಳೆಯರೊಂದಿಗೆ ಸೇರಿ ಅಪಹರಣದ ನಾಟಕವಾಡಿದ್ದ. ಅಲ್ಲದೇ 37 ಸಾವಿರ ರೂ ಹಣವನ್ನು ಸಹ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಸದ್ಯ ಆರೋಪಿ ಜೀವನ್, ಆತನ ಸ್ನೇಹಿತರಾದ ವಿನಯ್, ಪೂರ್ಣೇಶ್, ಪ್ರೀತಮ್ ಹಾಗೂ ರಾಜುನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
BSY ವಿರುದ್ಧ ‘ಪೋಕ್ಸೋ’ ಕೇಸ್ ವಿಚಾರ : ‘ಸುಪ್ರೀಂಕೋರ್ಟ್’ ನಿರ್ದೇಶನದಂತೆ ಘಟನಾ ಸ್ಥಳದಲ್ಲಿ ತನಿಖಾಧಿಕಾರಿಗಳ ಪರಿಶೀಲನೆ
ಸಹೋದರಿಯ ಮಗನ ಮಾತು ನಂಬಿ ಗಾಬರಿಗೊಂಡಿದ್ದ ಆತನ ಚಿಕ್ಕಮ್ಮ ಬೊಮ್ಮನಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಅಪಹರಣ ಪ್ರಕರಣವೆಂದು ತನಿಖೆ ಆರಂಭಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದರು. ಪೊಲೀಸ್ ವಿಚಾರಣೆ ವೇಳೆ ಜೀವನ್ ಹಣಕ್ಕಾಗಿ ಗೆಳೆಯರೊಂದಿಗೆ ಸೇರಿ ಅಪಹರಣದ ಡ್ರಾಮಾ ಮಾಡಿರುವುದು ತಿಳಿದುಬಂದಿದೆ.