ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ನೀಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲೋ ಭರವಸೆಯಿದೆ. ಇಲ್ಲೇ ಮನೆ ಮಾಡಿದ್ದೀನಿ. ಓಡಾಟಕ್ಕೆ ಏನೂ ತೊಂದರೆ ಇಲ್ಲ ಎಂಬುದಾಗಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲ್ಲುವ ಭರವಸೆಯಿದೆ. ಪ್ರಚಾರಕ್ಕೆ ಯಾರು ಯಾರು ಬರ್ತಾರೆ ನನ್ನ ಪರವಾಗಿ ಅಂತ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಹೇಳಿದರು.
ನಾನು ಶಿವಮೊಗ್ಗದಲ್ಲಿ ಮನೆ ಮಾಡಿದ್ದೀನಿ. ಓಡಾಡೋದಕ್ಕೆ ಏನೂ ಸಮಸ್ಯೆ ಇಲ್ಲ. ಈ ಬಾರಿ ನನ್ನ ಪರವಾಗಿ ಪ್ರಚಾರಕ್ಕೆ ಶಿವರಾಜ್ ಕುಮಾರ್ ಫಿಕ್ಸ್. ಕಳೆದ ಬಾರಿ 14 ದಿನ ಮಾತ್ರವೇ ಪ್ರಚಾರ ಮಾಡಿದ್ದೆ. ಈ ಬಾರಿ ಹೆಚ್ಚಿನ ಸಮಯ ಶಿವಮೊಗ್ಗದಲ್ಲೇ ಇರುತ್ತೇನೆ ಎಂದು ತಿಳಿಸಿದರು.
BREAKING : ಮಂಡ್ಯ : ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಬಂಧನ
2019ರಲ್ಲಿ ‘ಮಂಡ್ಯ’ದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ‘ಕಾಂಗ್ರೆಸ್ ಪಕ್ಷ’ವೇ ಕಾರಣ – HDK