ಕೇರಳ: ಭಾರತದಲ್ಲೇ ಮೊದಲ ಸರ್ಕಾರಿ ಸ್ವಾಮ್ಯದ ಒಟಿಟಿ ಪ್ಲಾಟ್ ಫಾರ್ಮ್ ಸಿಸ್ಪೇಸ್ ಗೆ ಕೇರಳ ಸರ್ಕಾರ ಗುರುವಾರ ಚಾಲನೆ ನೀಡಿದೆ. ಇದು ಮಲಯಾಳಂ ಚಿತ್ರರಂಗದ ಮುಂದಿನ ಪ್ರಯಾಣದಲ್ಲಿ ನಿರ್ಣಾಯಕ ಹೆಜ್ಜೆ ಆಗಲಿದೆ ಅಂತ ಸಿಎಂ ಪಿಣರಾಯಿ ವಿಜಯನ್ ಬಣ್ಣಿಸಿದ್ದಾರೆ.
ಮುಖ್ಯವಾಹನಿಯ ಚಲನಚಿತ್ರೋದ್ಯಮಕ್ಕೆ ಹಾನಿಯಾಗದಂತೆ ಕಲಾತ್ಮಕ ಮತ್ತು ಸಾಂಸ್ಕೃತಿಕ ಮೌಲ್ಯವುಳ್ಳ ಚಲನಚಿತ್ರಗಳಿಗೆ ಪ್ರಾಮುಖ್ಯತೆ ನೀಡುವ ಕ್ರಮ ಇದಾಗಿದೆ. ಲಾಭ ಗಳಿಸುವುದು ಖಾಸಗಿ ವಲಯದ ಒಟಿಟಿ ಪ್ಲಾಟ್ ಫಾರ್ಮ್ ಗಳ ಪ್ರಧಾನ ಉದ್ದೇಶವಾದರೇ, ಸಿಸ್ಪೇಸ್ ಗುಣಮಟ್ಟದ ಚಲನಚಿತ್ರಗಳನ್ನು ಮನೆಗೆ ತರುವ ಮಾಧ್ಯಮವಾಗಿ ಕೆಲಸ ಮಾಡಲಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಅಂದಹಾಗೇ ಕೇರಳ ಸರ್ಕಾರದಿಂದ ಭಾರತದಲ್ಲೇ ಮೊದಲು ಎನ್ನುವಂತೆ ಆರಂಭಿಸಿರುವಂತ ಸರ್ಕಾರಿ ಸ್ವಾಮ್ಯದ ಒಟಿಟಿ ಪ್ಲಾಟ್ ಫಾರ್ಮ್ ಅನ್ನು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮವು ನಿರ್ವಹಣೆಯನ್ನು ಮಾಡಲಿದೆ.
ಬೆಂಗಳೂರಲ್ಲಿ ನೀರಿಗಾಗಿ ಹಾಹಾಕಾರ : ಅನಗತ್ಯ ನೀರು ಪೋಲು ಮಾಡಿದರೆ ಬೀಳುತ್ತೆ ಭಾರಿ ದಂಡ!
‘ಚುನಾವಣಾ ಬಾಂಡ್’ : ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ‘SBI’ ವಿರುದ್ಧ ‘ನ್ಯಾಯಾಂಗ ನಿಂದನೆ’ ಕೇಸ್