ಬೆಂಗಳೂರು: ಪತಿಯು ಪತ್ನಿಗೆ ನೀಡುವ ಜೀವನಾಂಶದಲ್ಲಿ ವೈಯಕ್ತಿಕ ಪ್ರಯೋಜನದ ಖರ್ಚು-ವೆಚ್ಚದ ನೆಪ ಹೇಳಿ ಜೀವನಾಂಶದ ಮೊತ್ತ ಕಡಿತಗೊಳಿಸಲಾಗದು ಎಂದಿರುವ ಹೈಕೋರ್ಟ್, ಈ ನಿಟ್ಟಿನಲ್ಲಿ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದಕ್ಕೆ ಅರ್ಜಿದಾರರಿಗೆ 15 ಸಾವಿರ ರೂ. ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.
ನೀರಿನ ಬಿಕ್ಕಟ್ಟನ್ನು ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ : ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ
ಪತ್ನಿಯ ಜೀವನಾಂಶಕ್ಕಾಗಿ ಮಾಸಿಕ 15 ಸಾವಿರ ಹಾಗೂ ಮಕ್ಕಳ ಪೋಷಣೆಗೆ 10 ಸಾವಿರ ರೂ.ಗಳನ್ನು ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ವಿಧಿಸಿದ ಹಂಚಾಟೆ ಸಂಜೀವಕುಮಾರ್ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ನೀಡಿದೆ.ಅರ್ಜಿದಾರರು ತಾವು ಪಡೆದುಕೊಳ್ಳುತ್ತಿರುವ ವೇತನದ ರಶೀದಿಯನ್ನು ನ್ಯಾಯಪೀಠದ ಮುಂದೆ ಪ್ರಸುತ್ತಪಡಿಸಿದರು. ಭವಿಷ್ಯನಿಧಿ, ಮನೆ ಬಾಡಿಗೆ, ಪೀಠೋಪಕರಣ ಗಳಿಗೆ ಭರಿಸುತ್ತಿರುವ ವೆಚ್ಚವನ್ನು ಪರಿಗಣಿಸಿ ಜೀವನಾಂಶ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.
ಮುಂಬೈ : ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : 1.4ಕೋಟಿ ಮೌಲ್ಯದ 2.8ಕೆಜಿ ‘ಅಕ್ರಮ ಚಿನ್ನ’ ಜಪ್ತಿ
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವೇತನದಿಂದ ವೃತ್ತಿಪರ ತೆರಿಗೆ ಮತ್ತು ಆದಾಯ ತೆರಿಗೆ ಕಡಿತವಾಗುತ್ತಿದ್ದು, ಇನ್ನುಳಿದ ಎಲ್ಐಸಿ, ಪೀಠೋಪಕರಣಗಳ ಖರೀದಿ ಇನ್ನಿತರಗಳೆಲ್ಲವೂ ವೈಯಕ್ತಿಕ ಪ್ರಯೋಜನಕ್ಕಾಗಿ ಕಡಿತಗೊಳ್ಳುತ್ತಿದೆ. ಈ ನೆಪ ಹೇಳಿ ಪತ್ನಿಗೆ ನೀಡಲಾಗುತ್ತಿರುವ ಜೀವನಾಂಶವನ್ನು ಕಡಿತಗೊಳಿಸುವುದಕ್ಕೆ ಅವಕಾಶವಿಲ್ಲ.
ಬೆಂಗಳೂರು ಮೆಟ್ರೋ ‘ಯೆಲ್ಲೋ ಲೈನ್’ ಗಡುವು ವರ್ಷಾಂತ್ಯಕ್ಕೆ ಮುಂದೂಡಿಕೆ, ಈ ವಾರಾಂತ್ಯದಲ್ಲಿ ಪ್ರಾಯೋಗಿಕ ಸಂಚಾರ ಆರಂಭ
ಅಲ್ಲದೆ ಅರ್ಜಿಯನ್ನು ಪುರಸ್ಕರಿಸಿದಲ್ಲಿ ಸಿಆಪಿಸಿ ಸೆಕ್ಷನ್ 125ರ ಅಡಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಯ ಪ್ರತಿ ಪ್ರಕರಣದಲ್ಲೂ, ಪತಿಯು ಕೃತಕವಾಗಿ ಕಡಿತಗಳನ್ನು ತೋರ್ಪ ಡಿಸುವ ಪ್ರವೃತ್ತಿ ಇರುತ್ತದೆ. ಇದು ಜೀವನಾಂಶ ನಿರಾಕರಿಸಲು ಕೋರ್ಟ್ಗಳನ್ನು ದಾರಿತಪ್ಪಿಸುವ ಉದ್ದೇಶದಿಂದ ಇದ್ದು, ನಕಲಿ
ಸಂಬಳ ತೋರಿಸಲು ಯತ್ನಿಸುತ್ತಾರೆ ಎಂದು ಪೀಠ ಹೇಳಿದೆ.