ಬೆಂಗಳೂರು : ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವು ಖಂಡ ಬಳಿಕ ಸಂಭ್ರಮಾಚರಣೆಯ ವೇಳೆ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಹೊಸ ಬಾಂಬ್ ಸಿಡಿಸಿದ್ದು 2008ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬ್ ಇಟ್ಟಿದ್ದವರೆ ಇದೀಗ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಮನಗರ : ಹಣ ಡಬಲ್ ಆಗುತ್ತೆಂದು ಆಮಿಷ : ಯುವತಿಗೆ 12 ಲಕ್ಷ ದೋಖಾ ಮಾಡಿದ ವಂಚಕರು
ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ರಾಜ್ಯ ಸರ್ಕಾರವನ್ನು ಓಜಗೊಳಿಸಿ ಘೋಷಣೆ ಕೂಗಿದ್ದವರನ್ನು ಬಂಧಿಸಿ ಎಂದು ಇಂದು ಬಿಜೆಪಿ ಹಾಗೂ ಜೆಡಿಎಸ್ ವಿಧಾನಸೌಧದಿಂದ ರಾಜಭವನಕ್ಕೆ ಪಾದಯಾತ್ರೆಯ ಮೂಲಕ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
BREAKING:ವಾಹನ ಸವಾರರ ಗಮನಕ್ಕೆ ‘ಫಾಸ್ಟ್‌ಟ್ಯಾಗ್’ KYC ಗಡುವನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲು NHAI ಚಿಂತನೆ
ಈ ವೇಳೆ ಶಾಸಕ ಮುನಿರತ್ನ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದರಲ್ಲ ಅವರು ಬೇರೆ ಯಾರು ಅಲ್ಲ. 2008ರಲ್ಲಿ ಸ್ಟೇಡಿಯಂ ಹತ್ತಿರ ಬಾಂಬ್ ಇಟ್ಟರಲ್ಲ ಆ ನಾಸಿರ್ ಎನ್ನುವ ವ್ಯಕ್ತಿ ಜೊತೆ ಇದ್ದಂತಹ ಭಯೋತ್ಪಾದಕರು ಇಂದು ಜಿಂದಾಬಾದ್ ಕೂಗಿದ್ದಾರೆ.ಆ ನಾಸಿರ್ ಜೊತೆ ಇದ್ದವರೇ ಇವತ್ತು ಈ ನಾಸಿರ್ ಜೊತೆ ಇದ್ದಾರೆ ಎಂದರು.
BREAKING: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ಅಬ್ದುಲ್ ಕರೀಂ ತುಂಡಾನನ್ನು ಖುಲಾಸೆ ಗೊಳಿಸಿದ ಕೋರ್ಟ್!
ಈಗ ಜನ ಹೇಳುತ್ತಿರುವ ಪ್ರಕಾರ ಅವರೇ ಇರಬಹುದು ತನಿಖೆ ಮಾಡಿಸಿ ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ. ನಾಳೆ ದಿನ ಕಾಂಗ್ರೆಸ್ ಇವರು ಒಳ್ಳೆಯವರೆಂದರು ಆಶ್ಚರ್ಯ ಪಡಬೇಕಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾರ್ ಬಾಂಬ್ ಇಟ್ಟಿದ್ದಾರೆ ಅವರು ವಿಧಾನಸೌಧಕ್ಕೆ ಬಂದು ಬಾಂಬ್ ಇಡುವುದರಲ್ಲಿ ಯಾವುದೇ ಅನುಮಾನ ಇಲ್ಲ ರಾಜ್ಯ ಸರ್ಕಾರಕ್ಕೆ ಎಲ್ಲರಿಗೂ ಮಾಹಿತಿ ಇದು ಆದರೆ ಬಂಧಿಸುವ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.