ಬೆಂಗಳೂರು: ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2023ಕ್ಕೆ ರಾಷ್ಟ್ರಪತಿಗಳಿಂದ ಅಂಕಿತ ದೊರೆತಿದೆ.
ಈ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ಕಾನೂನು, ನ್ಯಾಯ ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದಂತ ಹೆಚ್.ಕೆ ಪಾಟೀಲ್ ಅವರು ಮಾಹಿತಿ ಹಂಚಿಕೊಂಡರು. ಸಣ್ಣ ಮತ್ತು ದುರ್ಬಲ ರೈತ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿರುವ ವ್ಯಕ್ತಿಗಳು, ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ದೀರ್ಘಕಾಲಿಕ ವ್ಯಾಜ್ಯವನ್ನು ಎದುರಿಸಲು ಸುಸ್ಥಿರ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಅಂಥ ವ್ಯಕ್ತಿಗಳಿಗೆ ಭದ್ರತೆಯನ್ನು ಒದಗಿಸಲು ಸಿವಿಲ್ ಪ್ರಕ್ರಿಯಾ ಸಂಹಿತೆ, 1908 (1908ರ ಕೇಂದ್ರ ಅಧಿನಿಯಮ 5)ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ವಿಹಿತವಾಗಿರುವುದರಿಂದ ಅಂಥ ಪ್ರಕರಣಗಳಿಗೆ ಯುಕ್ತವಾದ ಕಾಲಾವಧಿಯನ್ನು ಗೊತ್ತುಪಡಿಸುವ ಮೂಲಕ ಶೀಘ್ರ ನಿಗಧಿತ ಕಾಲದಲ್ಲಿ ನ್ಯಾಯದೊಂದಿಗೆ ಕಾರ್ಯಕ್ಷಮತೆಯ ಮೇಲೆ ವಿಲೇವಾರಿ ಮಾಡತಕ್ಕದ್ದು, ಅಂಥ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಸೂಕ್ತ ಕಾರ್ಯವಿಧಾನವನ್ನು ರೂಪಿಸುವುದು ಮತ್ತು ಮೇಲಿನ ಉದ್ದೇಶಗಳನ್ನು ಈಡೇರಿಸುವುದು ಅವಶ್ಯಕತೆಯನ್ನು ಮನಗೊಂಡು ಎಂದರು.
ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2023ನ್ನು ಕರ್ನಾಟಕ ವಿಧಾನಸಭೆಯಲ್ಲಿ 18.07.2023 ರಂದು ಮಂಡಿಸಲಾಯಿತು. ಸದರಿ ವಿಧೇಯಕವನ್ನು 19.07.2023 ರಂದು ವಿಧಾನಸಭೆಯಲ್ಲಿ ಮತ್ತು 20.07.2023 ರಂದು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು ಎಂದು ಹೇಳಿದರು.
ವಿಧೇಯಕದ ವಿಷಯವು ಭಾರತದ ಸಂವಿಧಾನದ ಏಳನೇ ಅನುಸೂಚಿಯ IIIನೇ ಪಟ್ಟಿಯ 13ನೇ ನಮೂದಿನ ಅಡಿಯಲ್ಲಿ ಬರುತ್ತದೆ. ಈ ವಿಧೇಯಕದ ಉಪಬಂಧಗಳು ಕೇಂದ್ರ ಅಧಿನಿಯಮವಾದ ಸಿವಿಲ್ ಪ್ರಕ್ರಿಯಾ ಸಂಹಿತೆ, 1908 (1908ರ ಕೇಂದ್ರ ಅಧಿನಿಯಮ 5) ರ ಉಪಬಂಧಗಳಿಗೆ ವ್ಯತಿರಿಕ್ತವಾಗಿರುವ ಕಾರಣ, ಮಾನ್ಯ ರಾಜ್ಯಪಾಲರು ಭಾರತದ ಸಂವಿಧಾನದ 200ನೇ ಅನುಚ್ಛೇದದಡಿಯಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2023ನ್ನು ಭಾರತದ ಸಂವಿಧಾನದ 254ನೇ ಅನುಚ್ಛೇದದ (2)ನೇ ಖಂಡದಲ್ಲಿ ಅಗತ್ಯಪಡಿಸಿದಂತೆ ಭಾರತದ ಗೌರವಾನ್ವಿತ ರಾಷ್ಟçಪತಿಗಳ ಪರ್ಯಾಲೋಚನೆ ಮತ್ತು ಒಪ್ಪಿಗೆಗಾಗಿ ಕಾಯ್ದಿರಿಸಲು ಇಚ್ಛಿಸಿದರು ಎಂದು ತಿಳಿಸಿದರು.
ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2023ನ್ನು ಗೌರವಾನ್ವಿತ ರಾಷ್ಟçಪತಿಗಳ ಒಪ್ಪಿಗೆಯನ್ನು ಪಡೆಯಲು ಮತ್ತು ತಿಳಿಸಲು ದಿನಾಂಕ: 28.07.2023ರ ಸಮಸಂಖ್ಯೆಯ ಪತ್ರದ ಮೂಲಕ ಭಾರತ ಸರ್ಕಾರದ ಗೃಹ ವ್ಯವಹಾರಗಳ ಮಂತ್ರಾಲಯಕ್ಕೆ ಕಳುಹಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಭಾರತ ಸರ್ಕಾರದ ಗೃಹ ವ್ಯವಹಾರಗಳ ಮಂತ್ರಾಲಯವು ಪತ್ರ ಸಂಖ್ಯೆ: F.No:17/31/2023-Judl & PP ಗೃಹ ವ್ಯವಹಾರಗಳ ಮಂತ್ರಾಲಯ, (J ಮತ್ತು PP ವಿಭಾಗ), ದಿನಾಂಕ: 21.02.2024ರ ಮೂಲಕ ಭಾರತದ ಸಂವಿಧಾನದ 201ನೇ ಅನುಚ್ಛೇದದಡಿಯಲ್ಲಿ ದಿನಾಂಕ: 18.02.2024 ರಂದು ಭಾರತದ ಗೌರವಾನ್ವಿತ ರಾಷ್ಟçಪತಿಯವರ ಅಂಕಿತ ನೀಡಿರುತ್ತಾರೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ಅವರು ತಿಳಿಸಿದರು.
‘ಶಿಕ್ಷಣ ಸಚಿವ ಮಧು ಬಂಗಾರಪ್ಪ’ ತವರು ಕ್ಷೇತ್ರದಲ್ಲೇ ‘ಶಾಲಾ ಶಿಕ್ಷಕ’ರ ಎಡವಟ್ಟು: ಮಕ್ಕಳಿಂದ ‘ಅಪಾಯಕಾರಿ ಕೆಲಸ’
BREAKING: ರಾಜ್ಯದಲ್ಲಿ ‘ಅಮಾನವೀಯ’ ಘಟನೆ: ಉತ್ತರ ಕನ್ನಡದಲ್ಲಿ ನಡುರಸ್ತೆಯಲ್ಲೇ ‘ಮಹಿಳೆ ಬಟ್ಟೆ’ ಹರಿದು ಹಲ್ಲೆ