ಬೆಂಗಳೂರು : ಕಂದಾಯ ಇಲಾಖೆಯ ಕೆಲಸಗಳನ್ನು ಮತ್ತಷ್ಟು ಚುರುಕುಗೊಳಿಸುವ ಸಂಬಂಧ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.
ಕೆಂಪು ಗ್ರಹದಲ್ಲಿ ರೋವರ್, ಡ್ರೋನ್ ನಿಯೋಜಿಸಲು ಇಸ್ರೋದ ಮುಂದಿನ ‘ಮಂಗಳಯಾನ’
ಸೋಮವಾರ ಬಿಜೆಪಿ ಸದಸ್ಯ ಕಿರಣ್ ಕುಮಾರ್ ಕೊಡ್ಡಿ ಪ್ರಶ್ನೆಗೆ ಉತ್ತರಿಸಿದ ಸಚಿ ವರು, ಇತರೆ ಇಲಾಖೆಗಳಿಗೆ ಹೋಲಿಸಿದರೆ ಕಂದಾಯ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಸ್ಯೆಗಳನ್ನು ಹೊತ್ತು ತರುತ್ತಾರೆ. ಹೀಗಾಗಿ ಶೀಘ್ರದಲ್ಲಿ ಒಂದು ಸಾವಿರ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.
40 ವಕೀಲರ ಮೇಲೆ FIR ಪ್ರಕರಣ : ಪಿಎಸ್ಐ ಅಷ್ಟೇ ಅಲ್ಲ ಎಸ್.ಪಿಯನ್ನ ಸಸ್ಪೆಂಡ್ ಮಾಡಿ : HDK ಆಗ್ರಹ
ಈ ನಡುವೆ, ವಿವಿಧ ಹಂತದ ನೌಕರರು ಬೇರೆಡೆ ನಿಯೋಜನೆ ಗೊಂಡಿರುವ ಕಾರಣ ಸಮಯಕ್ಕೆ ಸರಿಯಾಗಿ ಕೆಲಸವಾಗುವುದು ವಿಳಂಬವಾ ಗುತ್ತಿದೆ. ಹೀಗಾಗಿ ಹೊಸದಾಗಿ ನಿಯೋ ಜನೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನಿಯೋಜನೆಗೆ ಅವಕಾಶ ನೀಡಿಲ್ಲ ಎಂದು ಹೇಳಿದರು.