ಬೆಂಗಳೂರು : ಅತಿಸಾರ, ತೀವ್ರ ಉಸಿರಾಟ ತೊಂದರೆ, ಅಪೌಷ್ಟಿಕತೆ, ಅವಧಿ ಪೂರ್ವ ಮಕ್ಕಳ ಜನನ, ಮನೆಯಲ್ಲಿ ಹೆರಿಗೆ ಸೇರಿದಂತೆ ಇತರೆ ಕಾರಣಗಳಿಂದ 2022-23ನೆ ಸಾಲಿನಲ್ಲಿ ಒಟ್ಟು 8805 ಶಿಶುಗಳು ಸಾವನ್ನಪ್ಪಿವೆ.ಅಲ್ಲದೆ ಅದೇ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಯೊಂದರಲ್ಲೇ 614 ಶಿಶುಗಳು ಮೃತಪಟ್ಟಿವೆ ಎಂದು ವೈದ್ಯರು ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಇನ್ನು ಶಿಶುಗಳ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಇನ್ನು ಶಿಶುಗಳ ಸಾವಿಗೆ ತಾಯಂದಿರ ಆರೈಕೆಯಲ್ಲಿನ ವ್ಯತ್ಯಾಸವೂ ಒಂದು ಕಾರಣವಾಗಿದೆ. ಹಾಗೆ ಮಾತೃ ಪೂರ್ಣ ಯೋಜನೆ, ಮಾತೃವಂದನಾ, ಪೌಷ್ಟಿಕ ಆಹಾರ ವಿತರಣೆ ಇತರೆ ಯೋಜನೆಗಳು ಜಿಲ್ಲೆಯಲ್ಲಿ ವಿಫಲವಾಗಿವೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಹೆರಿಗೆ ವ್ಯವಸ್ಥೆ ಇಲ್ಲ ಎಂಬ ಆರೋಪವಿದೆ.
ಕೇವಲ ಬಳ್ಳಾರಿ ಜಿಲ್ಲೆ ಅಷ್ಟೆ ಅಲ್ಲದೆ ಬೆಂಗಳೂರು ನಗರ ಜಿಲ್ಲೆಯಲ್ಲಿ 1371, ಮೈಸೂರು ಜಿಲ್ಲೆಯಲ್ಲಿ 669, ರಾಯಚೂರ ಜಿಲ್ಲೆಯಲ್ಲಿ 633, ಬಳ್ಳಾರಿ ಜಿಲ್ಲೆಯಲ್ಲಿ 614 ಶಿಶುಗಳು ಮೃತಪಟ್ಟಿವೆ ಎಂದು ಮಾಹಿತಿ ತಿಳಿದುಬಂದಿದೆ.ಶಿಶುಗಳ ಸಾವಿನ ಪ್ರಮಾಣ ತಗ್ಗಿಸಲು ಜಿಲ್ಲಾಡಳಿತ ಮುಂದಾಗಿದೆ.
ಅಂಗನವಾಡಿ, ಆಶಾ ಕಾರ್ಯಕರ್ತರ ಮೂಲಕ ತಾಯಂದಿರಿಗೆ ತಲುಪಬೇಕಾದ ಪ್ರೋಟೀನ್ಗಳನ್ನ ಮುಟ್ಟಿಸಲು ಕ್ರಮ ಕೈಗೊಳ್ಳುತ್ತವೆ. ಒಂದು ವೇಳೆ ಯೋಜನೆಗಳು ತಲುಪುವಲ್ಲಿ ವಿಫಲವಾಗಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.