ಬೆಂಗಳೂರು: ರಾಜ್ಯದ ಅನುದಾನಿತ ಪ್ರೌಢಶಾಲಾ ಮಹಿಳಾ ಶಿಕ್ಷಕಿಯರು ( High School Teacher ) ಮತ್ತು ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ( Karnataka Government Emeployees ) ಇರುವಂತೆ ಶಿಶುಪಾಲನೆ ರಜೆ ಸೌಲಭ್ಯವನ್ನು ವಿಸ್ತರಿಸಿ, ಸರ್ಕಾರ ಆದೇಶಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ( School Education Department ) ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ನೀಡಲಾದ ಶಿಶುಪಾಲನ ರಜೆ ಸೌಲಭ್ಯವನ್ನು ಅನುದಾನಿತ ಪ್ರೌಢಶಾಲಾ ಮಹಿಳಾ ನೌಕರರಿಗೂ ವಿಸ್ತರಿಸುವ ಕುರಿತು ಕ್ರಮ ವಹಿಸೋದಕ್ಕೆ ತಿಳಿಸಿದ್ದಾರೆ.
ಸದರಿ ಸೌಲಭ್ಯವನ್ನು ವಿಸ್ತರಿಸಿದಲ್ಲಿ ಆಡಳಿತಾತ್ಮಕವಾಗಿ ಹಾಗೂ ವಿದ್ಯಾರ್ಥಿಗಳ ಶಇಕ್ಷಣಕ್ಕೆ ತೊಂದರೆಯಾಗದಂತೆ ರಜೆ ಸೌಲಭ್ಪಯವನ್ನು ವಿಸ್ತರಿಸಲು ಪರ್ಯಾಯ ವ್ಯವಸ್ಥೆಯನ್ನು ಸಂಬಂಧಿಸಿದ ಆಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರೇ ಸ್ವಂತ ಸಂಪನ್ಮೂಲದಿಂದಲೇ ಒದಗಿಸಿಕೊಂಡು, ಅನುದಾನಿತ ಶಾಲಾ ಮಹಿಳಾ ನೌಕರರಿಗೆ ಶಿಶುಪಾಲನೆ ರಜೆ ಮಂಜೂರು ಮಾಡುವಂತೆ ನಿರ್ದೇಶಿಸಿದ್ದಾರೆ.
ಲೋಕಸಭಾ ಚುನಾವಣೆ 2024 : ಹೈಕಮಾಂಡ್ ಭೇಟಿ ಬಳಿಕ ಮಾಜಿ ಸಚಿವ ವಿ.ಸೋಮಣ್ಣ ಫುಲ್ ಆಕ್ಟಿವ್