ಬೆಂಗಳೂರು : ಸ್ನಾ ಹೆಸರಿನಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ವೈಟ್ಫೀಲ್ಡ್ ವಿಭಾಗದ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿ, ಆರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ಸ್ಪಾ ಮ್ಯಾನೇಜರ್ ನವೀನ್ (26) ಮತ್ತು ಸಹಾಯಕ ಭರತ್ ಸಿಂಗ್(27) ಬಂಧಿತರು. ದಾಳಿ ವೇಳೆ ಮೂರು ಸಾವಿರ ರು. ನಗದು, ಎರಡು ವಾಕಿಟಾಕಿ, ಮೊಬೈಲ್, ಸ್ವಾಪಿಂಗ್ ಯಂತ್ರ, ಕಾಂ ಡೋಮ್ ಸೇರಿದಂತೆ ಕೆಲ ದಾಖಲೆಗ ಳನ್ನು ಜಪ್ತಿ ಮಾಡಲಾಗಿದೆ. ಸ್ಪಾದ ಮಾಲೀಕ ಭೀಮಾ ನಾಯಕ್ ತಲೆಮರೆಸಿ ಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರತ್ತಹಳ್ಳಿಯ ಹೊರವರ್ತುಲ ರಸ್ತೆ ಲಕ್ಷದೀಪ ಕಾಂಪ್ಲೆಕ್ಸ್ನ 1ನೇ ಮಹಡಿಯ ವಿಐಪಿ ಹೆಸರಿನ ಸ್ಪಾದಲ್ಲಿ ಹೊರರಾಜ್ಯದ ಹುಡುಗಿಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ವೈಟ್ ಫೀಲ್ಡ್ ವಿಭಾಗದ ಪೊಲೀಸರು ಸ್ವಾ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ದೆಹಲಿ, ಪಶ್ಚಿಮ ಬಂಗಾಳ, ಅಸ್ಸಾಂ, ಥೈಲ್ಯಾಂಡ್ ಮೂಲದ ಆರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ಸಾ ಮಾಲೀಕ ಭೀಮಾ ನಾಯಕ್, ನವೀನ್, ಭರತ್ ಸಿಂಗ್ ರಾಜ್ಯ ಹಾಗೂ ಹೊರರಾಜ್ಯದ ಅಮಾಯಕ ಮಹಿಳೆಯ ರಿಗೆ ಉದ್ಯೋಗ ಆಸೆ ತೋರಿಸಿ ಸ್ಪಾಗೆ ಕರೆ ತಂದು ಹಣದ ಆಮೀಷವೊಡ್ಡಿ ವೇಶ್ಯಾ ವಾಟಿಕೆ ದಂಧೆಯಲ್ಲಿ ತೊಡಗಿಸಿ ಅಕ್ರಮ ವಾಗಿ ಹಣ ಸಂಪಾದಿಸುತ್ತಿದ್ದರು ಎಂ ಬುದು ವಿಚಾರಣೆಯಿಂದ ತಿಳಿದು ಬಂ ದಿದೆ. ಮಾಲೀಕ ಭೀಮಾ ನಾಯಕ್ ಬಂ ಧನಕ್ಕೆ ಬಲೆ ಬೀಸಲಾಗಿದೆ. ಆತನ ಬಂಧ ನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗ ಲಿದೆ. ಎಚ್ಎಎಲ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಅನೈತಿಕ ಕೆಲಸ: ದೂರು ನೀಡಿ : ಅನೈತಿಕ ಚಟುವಟಿಕೆಗಳು ಕಂಡು ಬಂದಲ್ಲಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಮೊಬೈಲ್ ಸಂಖ್ಯೆ 94808 01084, ಮಾರತ್ತಹಳ್ಳಿ ಉಪ ವಿಭಾಗದಎಸಿಪಿ-9480801607 ಅಥವಾ ಎಚ್ಎಎಲ್ ಠಾಣೆ ಇನ್ ಪೆಕ್ಟರ್ಮೊಬೈಲ್ ಸಂಖ್ಯೆ 94808 01616 ಗೆ ಸಂಪರ್ಕಿಸಿ ನಿರ್ಭೀತಿ ಯಿಂದ ದೂರು ನೀಡುವಂತೆ ಅಧಿ ಕಾರಿಗಳು ತಿಳಿಸಿದ್ದಾರೆ.