ಮುಂಬೈ: ಇಲ್ಲಿನ ದಹಿಸರ್ ಪ್ರದೇಶದಲ್ಲಿ ಗುರುವಾರ ಫೇಸ್ಬುಕ್ ಲೈವ್ ಸ್ಟ್ರೀಮ್ ಮಾಡುವಾಗ ಶಿವಸೇನೆ (ಯುಬಿಟಿ) ನಾಯಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ನಂತರ ಅವರು ಗುಂಡೇಟಿನ ಗಾಯಗಳಿಂದ ನಿಧನರಾದರು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶಿವಸೇನೆ (ಯುಬಿಟಿ) ಮುಖಂಡ ವಿನೋದ್ ಘೋಸಾಲ್ಕರ್ ಅವರ ಪುತ್ರ ಅಭಿಷೇಕ್ ಘೋಸಾಲ್ಕರ್ ಮೌರಿಸ್ ಭಾಯ್ ಎಂದೂ ಕರೆಯಲ್ಪಡುವ ಮೌರಿಸ್ ನೊರೊನ್ಹಾ ಎಂಬಾತನೊಂದಿಗೆ ಫೇಸ್ಬುಕ್ ಲೈವ್ಸ್ಟ್ರೀಮ್ ಮಾಡುತ್ತಿದ್ದರು.
ಮೌರಿಸ್ ಭಾಯ್ ನಂತರ ಲೈವ್ ಸ್ಟ್ರೀಮ್ ಅನ್ನು ಮುಕ್ತಾಯಗೊಳಿಸಿ ಇನ್ನೇನು ಹೊರಡಬೇಕು ಎನ್ನುವಾಗ ಘೋಸಾಲ್ಕರ್ ಮೇಲೆ ಮೂರು ಬಾರಿ ಗುಂಡು ಹಾರಿಸಲಾಯಿತು. ಈ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೇ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
#WATCH | Uddhav Sena Leader Abhishek Ghosalkar Shot by Notorious Criminal In #Dahisar, Mumbai During Facebook Live#BREAKING #NewsUpdate #Mumbai pic.twitter.com/4R7KKuyMNu
— Free Press Journal (@fpjindia) February 8, 2024
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಭಿಷೇಕ್ ಘೋಸಾಲ್ಕರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ನಾಯಕ ಮಾಜಿ ಕಾರ್ಪೊರೇಟರ್ ಆಗಿದ್ದಾರೆ.
ಇತ್ತೀಚೆಗೆ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಅವರು ಶಿವಸೇನೆ ಮುಖಂಡ ಮಹೇಶ್ ಗಾಯಕ್ವಾಡ್ ಅವರನ್ನು ಮಹಾರಾಷ್ಟ್ರದ ಉಲ್ಹಾಸ್ನಗರದಲ್ಲಿ ಹಿಲ್ ಲೈನ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯ ಕ್ಯಾಬಿನ್ ಒಳಗೆ ಗುಂಡಿಕ್ಕಿ ಕೊಂದಿದ್ದರು. ಈ ಬೆನ್ನಲ್ಲೇ ಇಂದು ಅಭಿಷೇಕ್ ಘೋಸಾಲ್ಕರ್ ಮೌರಿಸ್ ಭಾಯ್ ಎಂಬುವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.