ಕೇಂದ್ರ ಸರ್ಕಾರ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಬಡ ಕುಟುಂಬಗಳಿಗಾಗಿ ಜಾರಿಗೆ ತಂದಿರುವ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಫಲಾನುಭಾವಿಗಳಿಗೆ ಉಚಿತ LPG ಸಂಪರ್ಕಗಳನ್ನು ಒದಗಿಸಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಯೋಜನೆಯ ಲಾಭ ಪಡೆಯಲು ಆನ್ಲೈನ್ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ, ಫಲಾನುಭವಿಗಳಿಗೆ ಉಚಿತ ಎಲ್ ಪಿಜಿ ಮತ್ತು ಗ್ಯಾಸ್ ಸ್ಟವ್ ನೀಡಲಾಗುತ್ತದೆ. ನೀವು PMUYಗಾಗಿ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ನಿಮ್ಮ ಪ್ರದೇಶದ ಹತ್ತಿರದ ಎಲ್ಪಿಜಿ ವಿತರಕರನ್ನು ಸಂಪರ್ಕಿಸಬೇಕಾಗುತ್ತದೆ.
PMUY ಗಾಗಿ ಅರ್ಹತಾ ಮಾನದಂಡಗಳು ಹೀಗಿವೆಯಾಗಿದೆ :
ಅರ್ಜಿದಾರರು ಮಹಿಳೆಯಾಗಿರಬೇಕು. ಅರ್ಜಿದಾರರ ವಯೋಮಿತಿ 18 ವರ್ಷಕ್ಕಿಂತ ಹೆಚ್ಚಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷಕ್ಕಿಂತ ಕಡಿಮೆ ಮತ್ತು ನಗರ ಪ್ರದೇಶದಲ್ಲಿ 2 ಲಕ್ಷಕ್ಕಿಂತ ಕಡಿಮೆಯಿರಬೇಕು. ಅರ್ಜಿದಾರರ ಕುಟುಂಬವು ಈಗಾಗಲೇ ಯಾವುದೇ LPG ಸಂಪರ್ಕವನ್ನು ಹೊಂದಿರಬಾರದು.
PMUY ಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಮೊದಲಿಗೆ, PMUY ನ ಅಧಿಕೃತ ವೆಬ್ಸೈಟ್ಗೆ ಹೋಗಿ. ಇದರ ನಂತರ, .”Apply for New Ujjwala 2.0 Connection” ಲಿಂಕ್ ಅನ್ನು ಕ್ಲಿಕ್ ಮಾಡಿಕೊಳ್ಳಿ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿಕೊಳ್ಳಿ. ”Send OTP” ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್ನಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಬೇಕು. ನಿಮ್ಮ ಹೆಸರು, ವಿಳಾಸ ಮತ್ತು ಅಗತ್ಯವಿರುವ ಇತರ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ. ನಿಮ್ಮ ಒಪ್ಪಿಗೆಯನ್ನು ನೀಡಿ ಮತ್ತು “Submit” ಬಟನ್ ಕ್ಲಿಕ್ ಮಾಡಬೇಕಾಗಿದೆ.