ಬೆಂಗಳೂರು: ನಿಯಮ ಮೀರಿ ತಡರಾತ್ರಿ ಪಬ್ ನಲ್ಲಿ ಪಾರ್ಟಿ ಮಾಡಿದಂತ ನಟ ದರ್ಶನ್ ( Actor Darshan ) ಸೇರಿದಂತೆ ಹಲವು ಸೆಲೆಬ್ರೆಟಿಗಳಿಗೆ ನೋಟಿಸ್ ನೀಡಿ, ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಇದೀಗ ನಟ ದರ್ಶನ್ ಅವರು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ವಿಚಾರಣಾಧಿಕಾರಿಗಳ ಮುಂದೆ ವಿಚಾರಣೆ ಹಾಜರಾಗಿದ್ದಾರೆ.
ಜೆಟ್ ಲ್ಯಾಬ್ ನಲ್ಲಿ ತಡರಾತ್ರಿ ಪಾರ್ತಿ ಮಾಡಿದಂತ ಪ್ರಕರಣ ಸಂಬಂಧ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ನಟ ದರ್ಶನ್, ನಿನಾನಸಂ ಸತೀಶ್ ಸೇರಿದಂತೆ ವಿವಿಧ ಸ್ಯಾಂಡಲ್ ವುಡ್ ನಟರಿಗೆ ನೋಟಿಸ್ ನೀಡಿದ್ದರು. ಈ ನೋಟಿಸ್ ಗೆ ಈಗಾಗಲೇ ಹಲವು ಸೆಲೆಬ್ರೆಟಿಗಳು ಪೊಲೀಸರ ಮುಂದೆ ವಿಚಾರಣೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದರು.
ದುಬೈ ಪ್ರವಾಸದಲ್ಲಿದ್ದಂತ ನಟ ದರ್ಶನ್ ಮಾತ್ರ ಹಾಜರಾಗಿರಲಿಲ್ಲ. ಇದೀಗ ದುಬೈನಿಂದ ವಾಪಾಸ್ ಆಗಿರುವ ಹಿನ್ನಲೆಯಲ್ಲಿ ಅವರು ಕೂಡ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಂಗಳೂರಿನ ಆರ್ ಆರ್ ನಗರದ ತಮ್ಮ ನಿವಾಸದಿಂದ ತೆರಳಿದಂತ ಅವರು, ಸುಬ್ರಹ್ಮಣ್ಯ ನಗರ ಠಾಣೆಗೆ ತೆರಳಿ, ವಿಚಾರಣಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾದರು.
ಅಂದಹಾಗೆ ಜೆಟ್ ಲ್ಯಾಬ್ ನಲ್ಲಿ ನಿಯಮ ಮೀರಿ, ಅವಧಿ ಮೀರಿ ಪಾರ್ಟಿ ಮಾಡಿದಂತ ನಟ ದರ್ಶನ್, ಡಾಲಿ ಧನಂಜಯ್, ನಿನಾಸಂ ಸತೀಶ್, ಚಿಕ್ಕಣ್ಣ ಸೇರಿದಂತೆ ಕೆಲ ಸೆಲೆಬ್ರೆಟಿಗಳಿಗೆ ಪೊಲೀಸರು ನೋಟಿಸ್ ನೀಡಿದ್ದರು.
ಕಲಬುರ್ಗಿಯಲ್ಲಿ ‘KSRTC ಬಸ್-ಬೈಕ್’ ನಡುವೆ ಭೀಕರ ಅಪಘಾತ: ‘ಇಬ್ಬರು ಸವಾರ’ರು ಸ್ಥಳದಲ್ಲೇ ಸಾವು
Watch Video: ‘ನಾಸಿಕ್’ನ ಕಲಾರಾಮ್ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ ‘ಪ್ರಧಾನಿ ಮೋದಿ’