ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರ: ತಾಲ್ಲೂಕಿನ ಗುಂಡ್ಲುಪೇಟೆ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ನಿಯಮಬಾಹಿರವಾಗಿ ಡ್ರೋಣ್ ಕ್ಯಾಮೆರಾ ಬಳಿ ದೇವಾಲಯ ಹಾರಾಡಿಸಲಾಗಿದ್ದು ಸಮೀಪದ ಆನೆಯೂ ಕೂಡ ಬೆಚ್ಚಿದೆ ಎನ್ನಲಾಗಿದೆ ಜೊತೆಗೆ ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ಶನಿವಾರ ಬೆಟ್ಟಕ್ಕೆ ಆಗಮಿಸಿದ್ದ ಪ್ರಭಾವಿಗಳು (ಸ್ವಂತ ವಾಹನದಲ್ಲಿ ಹೋಗಿದ್ದಾರೆ ಎನ್ನಲಾಗಿದೆ, ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಡ್ರೋಣ್ ಕ್ಯಾಮೆರಾ ಬಳಸಿ ಚಿತ್ರೀಕರಣ ನಡೆಸಿದ್ದಾರೆ ಅಷ್ಟೆ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಮಾಡಿದ್ದ ಆನೆಯ ಫೋಟೋಗಳು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದಂತೆ ಮಂಗಳವಾರ ಎಡಿಟ್ ಮಾಡಿದ ವೀಡಿಯೋ ಸಹಾ ಅಪ್ಲೋಡ್ ಮಾಡಿದ್ದಾರೆ. ಇದು ನೆಟ್ಟಿಗರ ಪಿತ್ತ ನೆತ್ತಿಗೇರಿಸಿದೆ.
ಸಂಜೆ ನಾಲ್ಕು ಗಂಟೆ ನಂತರ ಒಬ್ಬರನ್ನೂ ಬೆಟ್ಟದ ಮೇಲೆ ಇರಲು ಬಿಡದ ಅರಣ್ಯ ಇಲಾಖೆ 6 ಗಂಟೆವರೆಗೂ ಇರಲು ಡ್ರೋಣ್ ಕ್ಯಾಮೆರಾ ಬಳಸಲು ಹೇಗೆ ಒಪ್ಪಿಗೆ ನೀಡಿತು. ಸಾರ್ವಜನಿಕರಿಗೆ ಒಂದು ನ್ಯಾಯ ನಿಮಗೊಂದು ನ್ಯಾಯಾನಾ? ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಣ್ಣ ತೊಂದರೆಯಾದರೂ ಕಾಯ್ದೆ ಕಟ್ಟಲೆಗಳು ಕಟುವಾಗಿ ಬರುವಾಗ ಡ್ರೋಣ್ ಶಬ್ದ ಮಾಡದೆ ಹಾರೀತೆ ಎಂಬ ಅನುಮಾನ ಮೂಡಲಾರಂಬಿಸಿದೆ. ಹಿಂದೊಮ್ಮೆ ಕೆ.ಎ.ಎಸ್. ಅಧಿಕಾರಿಯೊಬ್ಬರು ಆನೆಗೆ ಪ್ರಸಾದ ಕೊಟ್ಟ ತಪ್ಪಿಗೆ ಪ್ರಕರಣ ದಾಖಲಾದರೂ ಮುಚ್ಚಿಹೋಯ್ತು. ಕಳೆದ ತಿಂಗಳು ಸ್ಥಳೀಯರೊಬ್ಬರು ಡ್ರೋಣ್ ಬಳಸಿ ಬೆಟ್ಟದ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈಗಲೂ ಅದೇ ಕೆಲಸ ಮುಂದುವರೆದಿದೆ. ಆದರೆ ಅರಣ್ಯ ಇಲಾಖೆ ಮಾತ್ರ ಡ್ರೋಣ್ ಬಳಕೆ ಸಂಬಂದ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.
ಯಾವುದೇ ಅನುಮತಿ ನೀಡಿಲ್ಲ. ಈ ಬಗ್ಗೆ ವಲಯಾರಣ್ಯಾಧಿಕಾರಿಗೆ ನೊಟೀಸ್ ನೀಡಲಾಗುವುದು.
ಡಾ.ಪಿ.ರಮೇಶ್ ಕುಮಾರ್, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕರು.