ನವದೆಹಲಿ: ಜುಲೈ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಪಾಟ್ನಾ ಭೇಟಿ ಅಡ್ಡಿಪಡಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ರೂಪಿಸಿದ್ದ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶನಿವಾರ ನಾಲ್ವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ.
ಪಾಟ್ನಾದ ಮುಸ್ಲಿಂ ರಾಘೋಪುರ ಗ್ರಾಮದ ಅಥರ್ ಪರ್ವೇಜ್, ಪಾಟ್ನಾದ ಫುಲ್ವಾರಿಶರೀಫ್ನ ಎಂಡಿ ಜಲಾಲುದ್ದೀನ್ ಖಾನ್, ದರ್ಭಾಂಗದ ಲಾಲ್ಬಾಗ್ನ ನೂರುದ್ದೀನ್ ಜಂಗಿ ಮತ್ತು ಫುಲ್ವಾರಿಶರೀಫ್ನ ಅರ್ಮಾನ್ ಮಲಿಕ್ ಅಲಿಯಾಸ್ ಎಂಡಿ ಇಮ್ತೇಯಾಜ್ ಅನ್ವರ್ ಆರೋಪಿಗಳಾಗಿದ್ದಾರೆ. ಇವರುಗಳು PFIನೊಂದಿಗೆ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.
ಚಾರ್ಜ್ಶೀಟ್ ಪ್ರಕಾರ, ಪ್ರಧಾನಿ ಮೋದಿಯವರು ಬಿಹಾರಕ್ಕೆ ಭೇಟಿ ನೀಡುವ ಒಂದು ದಿನದ ಮೊದಲು (2022 ರ ಜುಲೈ 12 ರಂದು) ಪಾಟ್ನಾದ ಫುಲ್ವಾರಿಶರೀಫ್ ಪ್ರದೇಶದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ನಿವೃತ್ತ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್, ಅಥೇರ್ ಪರ್ವೇಜ್ನನ್ನು ಬಂಧಿಸಿದ್ದರು. ಜಲಾವುದ್ದೀನ್ಗೆ ಸಿಮಿ ಉಗ್ರ ಸಂಘಟನೆ ಜೊತೆಗೆ ನಿಕಟ ಸಂಪರ್ಕ ಇತ್ತು ಎಂದು ತನಿಖಾಧಿಕಾರಿ ಮನೀಶ್ ಕುಮಾರ್ ಹೇಳಿದ್ದರು.
ಆರೋಪಿಗಳು ಫುಲ್ವಾರಿಶರೀಫ್ನ ಅಹ್ಮದ್ ಅರಮನೆಯಲ್ಲಿ ಬಾಡಿಗೆ ಮನೆ ಪಡೆದಿದ್ದರು. ಕೃತ್ಯಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಸಭೆಗಳನ್ನು ನಡೆಸುವುದರ ಜೊತೆಗೆ ಭಯೋತ್ಪಾದಕ ತರಬೇತಿ ನೀಡಲು ಅದರ ಆವರಣವನ್ನು ಬಳಸುತ್ತಿದ್ದರು. ಇದಕ್ಕಾಗಿ ಆರೋಪಿಗಳು ಹಣವನ್ನು ಸಂಗ್ರಹಿಸಿದ್ದರು. ಇದಕ್ಕೆ ಸದಸ್ಯರನ್ನು ನೇಮಿಸಿಕೊಂಡರು ಮತ್ತು 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ತಮ್ಮ ಅನುಯಾಯಿಗಳನ್ನು ಉತ್ತೇಜಿಸಿದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
BIG NEWS : 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ನಮ್ಮ ದೇಶ ನಕ್ಸಲಿಸಂ ಮುಕ್ತ: ಅಮಿತ್ ಶಾ ಭರವಸೆ
BIG NEWS : ʻಬ್ರಿಟಿಷ್ ಏರ್ವೇಸ್ʼ ಗಗನಸಖಿಯರಿಗೆ ನೂತನ ಸಮವಸ್ತ್ರವಾಗಿ ʻಹಿಜಾಬ್ʼ ಬಳಕೆ! | British Airways
BIG NEWS : 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ನಮ್ಮ ದೇಶ ನಕ್ಸಲಿಸಂ ಮುಕ್ತ: ಅಮಿತ್ ಶಾ ಭರವಸೆ
BIG NEWS : ʻಬ್ರಿಟಿಷ್ ಏರ್ವೇಸ್ʼ ಗಗನಸಖಿಯರಿಗೆ ನೂತನ ಸಮವಸ್ತ್ರವಾಗಿ ʻಹಿಜಾಬ್ʼ ಬಳಕೆ! | British Airways