ತಿರುಪತಿ: ತಿರುಮಲದಲ್ಲಿ ಇತ್ತೀಚೆಗೆ ಆಧುನೀಕರಿಸಿದ ಕೆಲವು ಅತಿಥಿಗೃಹಗಳು ಮತ್ತು ಕಾಟೇಜ್ಗಳ ವಸತಿ ಬಾಡಿಗೆಯನ್ನು 10 ಪಟ್ಟು ಹೆಚ್ಚಿಸಿರುವ ತಿರುಮಲ ತಿರುಪತಿ ದೇವಸ್ಥಾನವನ್ನು ಭಾರತೀಯ ಜನತಾ ಪಕ್ಷವು ತರಾಟೆಗೆ ತೆಗೆದುಕೊಂಡಿದೆ.
ತಿರುಮಲದಲ್ಲಿ ರೂಂಮ್ ಬಾಡಿಗೆಯನ್ನು 150 ರೂ.ನಿಂದ 1700 ರೂ.ಗೆ ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ. ಇದು ಭಕ್ತರಿಗೆ ಭಾರೀ ಹೊರೆಯಾಗಿದೆ. ನಾರಾಯಣಗಿರಿ ಅತಿಥಿಗೃಹದಲ್ಲಿ 750 ರೂ. ಇದ್ದ ಕೊಠಡಿ ಬಾಡಿಗೆ ಈಗ 1700 ರೂ.ಕ್ಕೆ ಏರಿಕೆಯಾಗಿದೆ. ಅದೇ ರೀತಿ ವಿಶೇಷ ಮಾದರಿಯ ಕಾಟೇಜ್ಗಳ ಬಾಡಿಗೆ 750 ರೂ. ನಿಂದ 2200 ರೂ.ಕ್ಕೆ ಏರಿಕೆಯಾಗಿದೆ. ಇನ್ನೂ, ವಿಶೇಷ ಕೊಠಡಿಯ ಬಾಡಿಗೆ ದರನ್ನು 2800 ರೂ.ಗೆ ಏರಿಸಲಾಗಿದೆ. ಬಾಡಿಗೆ ಜೊತೆಗೆ ಬಾಡಿಗೆ ಹಣದಷ್ಟೇ ಠೇವಣಿಯನ್ನು ಭಕ್ತರು ಪಾವತಿಸಬೇಕಾಗಿದೆ.
ತಿರುಮಲದಲ್ಲಿರುವ ಎಸ್ವಿ ತಂಗುದಾಣ ಮತ್ತು ನಾರಾಯಣಗಿರಿ ವಿಶ್ರಾಂತಿ ಗೃಹಗಳಿಗೆ ಆಧುನೀಕರಣಗೊಳಿಸಿ ಹೊಸ ರೂಪ ನೀಡಿದ್ದು, ಯಾತ್ರಾರ್ಥಿ ಭಕ್ತರ ಅಗತ್ಯತೆಗಳಿಗೆ ಅನುಗುಣವಾಗಿ ಬಾಡಿಗೆಯನ್ನು ಪರಿಷ್ಕರಿಸಲಾಗಿದೆ ಎಂದು ಟಿಟಿಡಿ ಹೇಳಿದೆ. ಈ ವಿಶ್ರಾಂತಿ ಗೃಹಗಳ ಬಾಡಿಗೆ ಸುಮಾರು ಮೂರು ದಶಕಗಳಷ್ಟು ಹಳೆಯದಾಗಿದೆ. ಆದರೆ, ಭಕ್ತರು ನೀಡಿದ ಸಲಹೆಗಳು ಮತ್ತು ಪ್ರತಿಕ್ರಿಯೆಯ ಮೇರೆಗೆ ಹೊಸ ಹವಾನಿಯಂತ್ರಣಗಳು, ಗೀಸರ್ಗಳು, ಮರದ ಹಾಸಿಗೆಗಳು ಮತ್ತು ಆಧುನಿಕ ಪೀಠೋಪಕರಣಗಳನ್ನು ಸೇರಿಸಲಾಯಿತು ಮತ್ತು ಕೊಠಡಿ ದರಗಳನ್ನು ಸೂಕ್ತವಾಗಿ ತರ್ಕಬದ್ಧಗೊಳಿಸಲಾಗಿದೆ” ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ಆನ್ ಲೈನ್ ನಲ್ಲಿ ಬಿರಿಯಾನಿ ಆರ್ಡರ್ ಮಾಡೋ ಮುನ್ನ ಎಚ್ಚರ.! ಕೇರಳದಲ್ಲಿ ಯುವತಿ ಸಾವು
ಆನ್ ಲೈನ್ ನಲ್ಲಿ ಬಿರಿಯಾನಿ ಆರ್ಡರ್ ಮಾಡೋ ಮುನ್ನ ಎಚ್ಚರ.! ಕೇರಳದಲ್ಲಿ ಯುವತಿ ಸಾವು