ಕಾಸರಗೋಡು: ಪುಡ್ ಡಿಲಿವರಿ ಆಪ್ ಮೂಲಕ ಆನ್ ಲೈನ್ ನಲ್ಲಿ ಯುವತಿಯೊಬ್ಬಳು ಬಿರಿಯಾನಿ ಆರ್ಡರ್ ಮಾಡಿದ್ದಳು. ಬಿರಿಯಾನಿ ಊಟ ಬಂದ ಬಳಿಕ, ಅದನ್ನು ಸೇವಿಸಿದಂತ ಯುವತಿ ಸಾವನ್ನಪ್ಪಿರೋ ಘಟನೆ ಕೇರಳದ ಕಾಸರಗೋಡಿನ ಪೆರುಂಬಳದಲ್ಲಿ ನಡೆದಿದೆ.
ಡಿಸೆಂಬರ್ 31ರಂದು ಕಾಸರಗೋಡಿನ ರೆಸ್ಟೋರೆಂಟ್ ಒಂದರಿಂದ ಅಂಜು ಶ್ರೀಪಾರ್ವತಿ(20) ಬಿರಿಯಾನಿ ಆರ್ಡರ್ ಮಾಡಿದ್ದಳು. ಹೀಗೆ ಆರ್ಡರ್ ಮಾಡಿದಂತ ಬಿರಿಯಾನಿ ತಿಂದ ಬಳಿಕ ಯುವತಿ ಪುಡ್ ಪಾಯಿಸನ್ಸ್ ನಿಂದ ಅಸ್ವಸ್ಥಗೊಂಡಿದ್ದಳು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಆದ್ರೇ ಪುಡ್ ಪಾಯಿಸನ್ ಬಳಿಕ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಂತ ಅಂಜು ಶ್ರೀಪಾರ್ವತಿ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಪೋಷಕರು ನೀಡಿದಂತ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವಂತ ಪೊಲೀಸರು, ಮರಣೋತ್ತರ ಪರೀಕ್ಷೆ ಬಳಿಕ, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನೂ ಈ ಘಟನೆಯ ಬಳಿಕ ಎಚ್ಚತ್ತುಕೊಂಡಿರುವಂತ ಕೇರಳ ಸರ್ಕಾರವು, ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಅಲ್ಲದೇ ಪುಡ್ ಪಾಯಿಸನ್ಸ್ ಆರೋಪ ಹೊತ್ತಿರುವ ಹೋಟೆಲ್ ಗಳ ಪರವಾನಗಿಯನ್ನು ರದ್ದುಗೊಳಿಸುವಂತೆಯೂ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚಿಸಿದ್ದಾರೆ.
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಾಟ್ಸಾಪ್, ಕ್ಯೂ ಆರ್ ಕೋಡ್ ಮೂಲಕ ಒಮ್ಮೆಗೆ ಟಿಕೆಟ್ ಖರೀದಿಗೆ ಅವಕಾಶ