ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ಬಿಎಂಆರ್ ಸಿಎಲ್ ಇನ್ಮುಂದೆ ವಾಟ್ಸಾಪ್, ಕ್ಯೂ ಆರ್ ಕೋಡ್ ಮೂಲಕ ಒಂದು ಬಾರಿಗೆ 6 ಟಿಕೆಟ್ ಖರೀದಿಸೋದಕ್ಕೆ ಅವಕಾಶ ನೀಡಿದೆ. ಈ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.
ನಮ್ಮ ಮೆಟ್ರೋ ಕಳೆದ ನವೆಂಬರ್ 1ರಿಂದ ಪರಿಚಯಿಸಿದಂತ ಈ ಯೋಜನೆ ಜಾರಿಗೊಳಿಸಿದೆ. ಈಗ ಸದ್ಯಕ್ಕೆ ಒಬ್ಬರಿಗೆ ಒಂದು ಟಿಕೆಟ್ ಖರೀದಿಗೆ ಅವಕಾಶ ನೀಡಿರುವಂತ ಬಿಎಂಆರ್ ಸಿಎಲ್, ಇನ್ನೊಂದು ತಿಂಗಳಿನಲ್ಲಿ ಒಂದೇ ಬಾರಿಗೆ ಆರು ಜನರಿಗೆ ಟಿಕೆಟ್ ಖರೀದಿಸಲು ಸಾಧ್ಯವಾಗುವಂತೆ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಬಳಿಕ 10 ಟಿಕೆಟ್ ಖರೀದಿಗೂ ಅವಕಾಶ ನೀಡುವಂತ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ಹಿರಿಯ ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂದಹಾಗೇ ನವೆಂಬರ್ 1ರಿಂದ ಜಾರಿಗೊಳಿಸಿದಂತ ಕ್ಯೂ ಆರ್ ಕೋಟ್ ಮೂಲಕ ಟಿಕೆಟ್ ಖರೀದಿಯ ವ್ಯವಸ್ಥೆಯಡಿ 2.1 ಲಕ್ಷ ಟಿಕೆಟ್ ಈವರೆಗೆ ಮಾರಾಟವಾಗಿವೆ. ಕಳೆದ ಡಿಸೆಂಬರ್ 6ರವರೆಗೆ ಕ್ಯೂ ಆರ್ ಕೋಟ್ ಸ್ಕ್ಯಾನ್ ಮೂಲಕ ಬರೋಬ್ಬರಿ 7,45,299 ಮಂದಿ ಟಿಕೆಟ್ ಖರೀದಿಸಿದ್ದಾರೆ.
BIGG NEWS : `ಅನ್ನಭಾಗ್ಯ ಯೋಜನೆ’ : ಅಂತ್ಯೋದಯ, BPL ಪಡಿತರ ಚೀಟಿದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ
Watch Video: ಹೊಸ ವರ್ಷದ ‘ಮೊದಲ ಸೂರ್ಯೋದಯ’ ಹೇಗಿತ್ತು ಗೊತ್ತಾ.? ಇಲ್ಲಿದೆ ವೀಡಿಯೋ ನೋಡಿ